ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣದಿಂದ ದಲಿತರಿಗೆ ವಂಚನೆ
ದಲಿತ ಹಕ್ಕುಗಳ ಸಮಿತಿ ಸಭೆಯಲ್ಲಿ ಸಂಜೀವ ಬಳ್ಕೂರು
ಸಾಲಿಗ್ರಾಮ: ಕೇಂದ್ರದ ಬಿಜೆಪಿ ಸರಕಾರ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಎಸ್ ಸಿ, ಎಸ್ ಟಿ ಸಮುದಾಯದ ಯುವಜನಾಂಗವನ್ನು ಉದ್ಯೋಗ ವಂಚಿತರನ್ನಾಗಿಸುತ್ತಿದೆ ಎಂದು ದಲಿತ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ, ಜನಪರ ಹೋರಾಟಗಾರ, ಚಿಂತಕ ಸಂಜೀವ ಬಳ್ಕೂರು ಆರೋಪಿಸಿದ್ದಾರೆ.
ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಡಾಹೋಳಿಯಲ್ಲಿ ಮಾರ್ಚ್ 16ರಂದು ನಡೆದ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.
ಕಟ್ಟಡ ಕಾರ್ವಿುಕರ ಸಂಘಟನೆಯ ಮುಖಂಡ, ದಲಿತ ಹಕ್ಕುಗಳ ಸಮಿತಿಯ ತಾಲೂಕು ಸಹ ಸಂಚಾಲಕ ರಾಮ ಕಾರ್ಕಡ ನೇತೃತ್ವದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಕೆ. ಬಿ. ಅಣ್ಣಯ್ಯ ವಹಿಸಿದ್ದರು.
ಜನಪರ ಹೋರಾಟಗಾರ, ಲೇಖಕ ಶ್ರೀರಾಮ ದಿವಾಣ, ದಲಿತ ಹಕ್ಕುಗಳ ಸಮಿತಿಯ ತಾಲೂಕು ಸಂಚಾಲಕ ರವಿ ವಿ.ಎಂ. ಮುಂತಾದವರು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಗಣೇಶ್ ಬಡಾಹೊಳಿ, ಶೇಖರ ಮಾಸ್ತರ್, ಕೆ. ಬಿ. ಅಣ್ಣಯ್ಯ ಹಾಗೂ ಕು. ನಿಶ್ಮಿತಾ ಇವರ ಸಂಚಾಲಕತ್ವದಲ್ಲಿ ದಲಿತ ಹಕ್ಕುಗಳ ಸಮಿತಿ (ಡಿ ಎಚ್ ಎಸ್)ಯ ಗ್ರಾಮ ಘಟಕವನ್ನು ರಚಿಸಲಾಯಿತು.






































