ಸಾರ್ವಜನಿಕ ರಸ್ತೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ
ಮೂಡುಬಿದಿರೆ: ಕಡಂದಲೆ ನೀರಳಿಕೆ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಸೈಕಲ್ನಲ್ಲಿ ಬರುತ್ತಿದ್ದ ಬರುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬoಧಿಸಿದoತೆ ಮಾರ್ಪಾಡಿ ಗ್ರಾಮದ ಅಲಂಗಾರಿನ ಪವನ್ ಕುಮಾರ್ (19) ಎಂಬಾತನನ್ನು ಮೂಡುಬಿದಿರೆ ಪೊಲೀಸರು ಬಂಧೀಸಿದ್ದಾರೆ.
ಮಾರ್ಚ್ 8 ರಂದು ಸಂಜೆ 4.30ಕ್ಕೆ ಈ ಘಟನೆ ನಡೆಸಿರುತ್ತದೆ.
ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಬಂದಿದ್ದ ವಿದ್ಯಾರ್ಥಿನಿ ಊಟ ಮುಗಿಸಿ ಟ್ಯೂಷನ್ಗೆ ತೆರಳಿದ್ದಳು. ಟ್ಯೂಷನ್ ಮುಗಿಸಿ ಸಂಜೆ 4.30ರ ಹೊತ್ತಿಗೆ ಮನೆ ಹಿಂತಿರುಗುತ್ತಿದ್ದಾಗ ನೀರಳಿಕೆ ಪಂಪ್ ಶೆಡ್ ಬಳಿಯಲ್ಲಿ ಕಪ್ಪು ಬಣ್ಣದ ಹೊಸ ಡಿಯೋ ಸ್ಕೂಟಿಯಲ್ಲಿ ಬಂದಿದ್ದದ ಯುವಕ “ಬಾ ಒಂದು ಸುತ್ತು ತಿರುಗಾಡಿ ಬರೋಣ” ಎನ್ನುವ ಮೂಲಕ ಬಾಲಕಿಯನ್ನು ತಬ್ಬಿಹಿಡಿದು ದೈಹಿಕ ಹಿಂಸೆ ನೀಡಿದ್ದಾನೆ.
ಈ ಕುರಿತು ಆರೋಪಿಯ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.














