ಸಾರ್ವಜನಿಕ ಗಣೇಶೋತ್ಸವದ ಆಚರಣೆಯು ಏಕತೆಯ ಸಂಕೇತ -ಮಾಜಿಸಚಿವ ಅಭಯ ಚಂದ್ರ ಜೈನ್
ಮೂಡುಬಿದಿರೆ ಗಣೇಶೋತ್ಸವ ಸಮಾರೋಪ ಸಮಾರಂಭ
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ : ಸಾರ್ವಜನಿಕ ಗಣೇಶೋತ್ಸವದ ಆಚರಣೆಯು ಏಕತೆಯ ಸಂಕೇತವಾಗಿದೆ. ಅದರ ಭಾಗವಾಗಿ ಪ್ರತಿವರ್ಷದಂತೆ ಪ್ರಸಕ್ತ ವರ್ಷಾವಧಿಯಲ್ಲಿ ಮೂಡುಬಿದಿರೆಯಲ್ಲಿ ಕಳೆದ ಐದು ದಿನಗಳಿಂದ ಸಂಭ್ರಮದಿಂದ ಆಚರಿಸಿದ ಉತ್ಸವವು , ಅಸಂಖ್ಯಾತರು ಕಣ್ಮನದಿಂದ ತೃಪ್ತಿ ಪಟ್ಟಿದ್ದಾರೆ ಎಂದು ಮಾಜಿಸಚಿವ ಅಭಯ ಚಂದ್ರ ಜೈನ್ ಅಭಿಮತ ವ್ಯಕ್ತಪಡಿಸಿದ್ದಾರೆ.
ಕೊಲಕಾಡಿ ವಾದಿರಾಜ ಉಪಾಧ್ಯಾಯರು ಧಾರ್ಮಿಕ ಉಪನ್ಯಾಸ ನೀಡಿ ಭವ್ಯ, ದಿವ್ಯ ಭಾರತದಲ್ಲಿ ಗಣಪತಿಯ ಸಂಘಟನಾತ್ಮಕ ಧಾರ್ಮಿಕ ಮತ್ತು ಸಾಂಸ್ಕೃತಿಕಗಳು ಸೇರಿದ ಸಮರ್ಪಣಾ ಕಾರ್ಯ, ಆಚರಣೆ ಅತ್ಯಂತ ಶ್ರೇಷ್ಠ ಎಂದು ತಮ್ಮ ಧಾರ್ಮಿಕ ಉಪನ್ಯಾಸದಲ್ಲಿ ತಿಳಿಸಿದರು.
ವಕೀಲೆ, ಮಕ್ಕಳ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಡಾ. ಅಕ್ಷತಾ ಆದರ್ಶ ಮಾತನಾಡಿ, ಗಣಪತಿ ಆರಾಧನೆ ಜನರನ್ನು ಒಗ್ಗೂಡಿಸುವುದಕ್ಕೆ ಮಾಧ್ಯಮವಾಗಿರುವುದು ಹರ್ಷದಾಯಕವಾಗಿದೆ. ಪ್ರತಿಯೊಂದು ಹಬ್ಬದಲ್ಲೂ ಮಣ್ಷಿನ ಆರಾಧನೆ ಮಾಡುವುದು ಕಾಣಬಹುದು. ಇದು ಪ್ರಕೃತಿಯ ಆರಾಧನೆಯೂ ಆಗಿದೆ ಎಂದರು.

ಮುಖ್ಯಮಂತ್ರಿಗಳ ಪದಕ ವಿಜೇತ ಮೂಡುಬಿದಿರೆ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ ಜಿ ಅವರನ್ನು ಸಂಮಾನಿಸಲಾಯಿತು.

ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ ನ ಅಧ್ಯಕ್ಷ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ರೋಟರಿ ಕ್ಲಬ್ ಅಧ್ಯಕ್ಷ ರವಿ ಪ್ರಸಾದ್ ಉಪಾಧ್ಯಾಯ, ಜಯಶ್ರೀ ಅಮರನಾಥ ಶೆಟ್ಟಿ, ಪುರಸಭಾ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಉತ್ಸವ ಸಮಿತಿಯ ಕಾರ್ಯದರ್ಶಿ ನಾರಾಯಣ ಪಿ ಎಂ ಹಾಜರಿದ್ದರು. ಪ್ರಶಾಂತ್ ಸ್ವಾಗತಿಸಿದರು. ಯತಿರಾಜ್ ಕಾರ್ಯಕ್ರಮ ನಿರ್ವಹಿಸಿದರು. ಚೇತನ್ ಶೆಟ್ಟಿ ವಂದಿಸಿದರು.
.

ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆಯ ಒಂದು ದೃಶ್ಯಾವಳಿ….




































