ಸಾಮಾಜಿಕ ಸತ್ಕಾರ್ಯಗಳಲ್ಲಿ ಸಂಘ- ಸಂಸ್ಥೆಗಳ ಕೊಡುಗೆ ಅಮೂಲ್ಯ-ಶಾಸಕ ವಿ.ಸುನೀಲ್ ಕುಮಾರ್
RB NEWS
Bureau Report
ಸಾಮಾಜಿಕ ಸತ್ಕಾರ್ಯಗಳಲ್ಲಿ ಸಂಘ- ಸಂಸ್ಥೆಗಳ ಕೊಡುಗೆ ಅಮೂಲ್ಯ-ಶಾಸಕ ವಿ.ಸುನೀಲ್ ಕುಮಾರ್
ಕಾರ್ಕಳ : ಶ್ರೀ ದುರ್ಗಾ ಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಜೋಡುರಸ್ತೆ ಕಾರ್ಕಳ ಇದರ ವತಿಯಿಂದ ಸಾರ್ವಜನಿಕ ಸರಕಾರಿ ಆಸ್ಪತ್ರೆ ಕಾರ್ಕಳ ಇಲ್ಲಿಗೆ ರೆಫ್ರೀಜಿ ರೆಟರ್ ಹಾಗೂ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮವು ಶಾಸಕ ವಿ ಸುನಿಲ್ ಕುಮಾರ್ ಉಪಸ್ಥಿತಿಯಲ್ಲಿ ನೆರವೇರಿತು.
ಇದೇ ಸಂದರ್ಭದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸಂಘ ಸಂಸ್ಥೆಗಳು ಈ ರೀತಿ ಕೊಡುಗೆಗಳನ್ನು ನೀಡುವುದರಿಂದ ಹಲವಾರು ಜನರಿಗೆ ಉಪಯೋಗವಾಗುತ್ತದೆ. ಸರಕಾರದೊಂದಿಗೆ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಮುಂದಾದಾಗ ಹೆಚ್ಚಿನ ಪ್ರಯೋಜನ ದೊರಕುತ್ತದೆ ಎಂದರು.
ಶ್ರೀ ದುರ್ಗಾ ಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಕಾರ್ಯ ಶ್ಲಾಘನೀಯವೆಂದು ಶಾಸಕ ಸುನೀಲ್ ಕುಮಾರ್ ಕೊಂಡಾಡಿದರು.
ಸಂಘದ ಅಧ್ಯಕ್ಷ ಸಂತೋಷ್ ರಾವ್ ಮಾತನಾಡಿ, ಸಂಘವು ಈ ಹಿಂದೆಯೂ ಸರಕಾರಿ ಆಸ್ಪತ್ರೆಗೆ ಕೊರೋನ ಸಂದರ್ಭದಲ್ಲಿ ಆಮ್ಲಜನಕ ಘಟಕಕ್ಕೆ ಧನ ಸಹಾಯ ನೀಡಿರುತ್ತದೆ ಹಾಗೂ ಇನ್ನಿತರ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ಶಾಸಕರ ಸರ್ವರೀತಿಯ ಸಹಕಾರ ಸಂಘಕ್ಕೂ ಇರಲಿ ಎಂದು ಆಶಿಸಿದರು.
ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ ಸಹ ವೈದ್ಯರಾದ ಡಾ. ಅನಂತ್ ಕಾಮತ್, ಡಾ. ಉದಯ ಕುಮಾರ್ ಹಾಗೂ ಸಂಘದ ಉಪಾಧ್ಯಕ್ಷ ವೃಷಭರಾಜ್ ಕಡಂಬ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ ನಿರ್ದೇಶಕ ರಾದ ಯೋಗಿಶ್ ಸಾಲಿಯಾನ್, ಸಂದೀಪ್ ನಾಯಕ್, ದಿನೇಶ್ ಕುಮಾರ್ ವೈ, ಅನಿಲ್ ಕುಮಾರ್ ಸಂಘದ ಸಿಬ್ಬಂದಿಯವರು ಹಾಗೂ ಅಸ್ಪತ್ರೆ ಸಿಬ್ಬಂದಿಯವರು ಉಪಸ್ಥಿತರಿದ್ದರು.