ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸುತ್ತಿರುವ ಬಿಜೆಪಿ:
ಮೂಡುಬಿದಿರೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಖಂಡನೆ
ಮೂಡುಬಿದಿರೆ : ಮೂಡುಬಿದಿರೆ ತಾಲೂಕು ಪಡುಕೋಣಾಜೆ ಗ್ರಾಮದಲ್ಲಿ 45 ಎಕರೆ ಜಾಗವನ್ನು ಸರಕಾರ ವಕ್ಫ್ ಗೆ ಮೀಸಲು ಇಟ್ಟಿದೆ ಎಂಬುದಾಗಿ ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಾರ್ವಜನಿಕವಾಗಿ ಅಶಾಂತಿ ಸೃಷ್ಟಿಸುತ್ತಿದೆ ಎಂದು ಮೂಡುಬಿದಿರೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ದೂರಿದ್ದಾರೆ.


ಈ ಬಗ್ಗೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿಯು ಈಗಾಗಲೇ ಕಂದಾಯ ಅಧಿಕಾರಿಯರಲ್ಲಿ ವಿವರಣೆ ಕೇಳಿದಾಗ ಈ ಮಾಹಿತಿಯೊಂದಿಗೆ ಇರುವ ದಾಖಲೆಗಳ ಪ್ರಕಾರ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಸರಕಾರ ಮಾಡುತ್ತಿರುವ ಜನಪರ ಯೋಜನೆಗಳನ್ನು ಬಿಜೆಪಿ ದಾರಿ ತಪ್ಪಿಸುತ್ತಿದೆ ಎಂದು ತಿಳಿಸಿ ಮೂಡುಬಿದಿರೆ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಬಿ ಜೆ ಪಿ ಯುವರ ಕಾರ್ಯವನ್ನು ಸಂಪೂರ್ಣವಾಗಿ ಖಂಡಿಸುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭ ಗ್ಯಾರಂಟಿ ಅನುಷ್ಠಾನ ಸಮಿತಿಯ ಶಿವಾನಂದ ಎಸ್ ಪಾಂಡ್ರು ಹಾಜರಿದ್ದರು.





































