ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ಸುದ್ದಿ!

Picture of RB NEWS

RB NEWS

Bureau Report

ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಜಂಕ್ಷನ್ ನಲ್ಲಿ ನಡೆದ ಈ ಇಫ್ತಾರ್ ಕೂಟದ ವಿಡಿಯೋವನ್ನು ಗೆಳೆಯರೋರ್ವರು ನನಗೆ ಕಳುಹಿಸಿಕೊಟ್ಟರು. ಹಾಗಂತ ಇದಕ್ಕೆ, ‘ಹಿಂದುಗಳು ರಸ್ತೆ ಬ್ಲಾಕ್ ಮಾಡಿ ಹಬ್ಬ ಆಚರಿಸಲ್ವಾ..’ ಎಂಬ ಪ್ರಶ್ನೆ ಉತ್ತರ ಆಗುವುದಿಲ್ಲ ಮತ್ತು ಆಗಬಾರದು.

ವಾಹನದಟ್ಟಣೆ ಹೆಚ್ಚಾಗಿರುವ ಸಂಜೆಯ ವೇಳೆ ರಸ್ತೆಯನ್ನೇ ಬ್ಲಾಕ್ ಮಾಡಿ ಇಫ್ತಾರ್ ಕೂಟ ಆಚರಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಯಂತೂ ಇದ್ದೇ ಇದೆ. ಈ ಇಫ್ತಾರ್ ತಯಾರಿಗೆ ಕನಿಷ್ಠವೆಂದರೂ ಒಂದು ಗಂಟೆ ಬೇಕಾಗಬಹುದು. ಅಷ್ಟೂ ಸಮಯ ವಾಹನಗಳು ಒನ್ ವೇಯನ್ನೇ ಬಳಸಬೇಕಾಗುತ್ತದೆ. ಇಂಥ ಸಂದರ್ಭಗಳಲ್ಲಿ ಸಾರ್ವಜನಿಕರ ಅಸಹನೆ ಅಸಂತೋಷಕ್ಕೂ ಅದು ಕಾರಣವಾಗುತ್ತದೆ. ಸೌಹಾರ್ದ ಇಫ್ತಾರ್ ಕೂಟವು ಸಾರ್ವಜನಿಕ ಸಹ್ಯ ಮತ್ತು ಸುಖಿ ಭಾವವನ್ನು ಮೂಡಿಸಬೇಕೆ ಹೊರತು ವಿರುದ್ಧ ಭಾವಕ್ಕೆ ಆಸ್ಪದ ಕೊಡಬಾರದು. ಆದ್ದರಿಂದ,

ಸಾರ್ವಜನಿಕರಿಗೆ ತೊಂದರೆ ಆಗಬಹುದಾದ ರೀತಿಯಲ್ಲಿ ಇಫ್ತಾರ್ ಕೂಟ ಅಥವಾ ಇನ್ನಾವುದೇ ಕಾರ್ಯಕ್ರಮಗಳು ಏರ್ಪಾಡಾಗದಂತೆ ನೋಡಿಕೊಳ್ಳುವುದು ಉತ್ತಮ. ಸೌಹಾರ್ದ ಇಫ್ತಾರ್ ಕೂಟವನ್ನು ಏರ್ಪಡಿಸುವುದು ಎಷ್ಟು ಮುಖ್ಯವೋ ಅದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಸೌಹಾರ್ದ ಬಯಸುವವರನ್ನು ಒತ್ತಡಕ್ಕೆ ಸಿಲುಕಿಸದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಮುಂಜಾನೆಯಿಂದ ಮುಸ್ಸಂಜೆಯವರೆಗೆ ಆಚರಿಸಿದ ಉಪವಾಸದಿಂದ ಬಿಡುಗಡೆಗೊಳ್ಳುವಾಗ ಯಾರಲ್ಲೂ ಬಂಧನದ ಭಾವ ಮೂಡದಿರಲಿ.

ಏ ಕೆ ಕುಕ್ಕಿಲ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top