ಸಾಮಾಜಿಕ ಅಭಿವೃದ್ಧಿಗೆ ಪುರುಷರ ಸಂಘಟನೆಯು ಮುಖ್ಯ : ರೆ.ಫಾ. ಹೆರಾಲ್ಡ್ ಪಿರೇರಾ
ಕಾರ್ಕಳ : ಚೇತನಾ ಪುರುಷರ ಮಹಾಸಂಘ, ಕಣಜಾರು ತಮ್ಮ ಮಹಾಸಂಘದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಗಸ್ಟ್ 4, 2024 ರಂದು ಕಣಜಾರು, ಜೀವನ ಜ್ಯೋತಿ ವಠಾರದಲ್ಲಿ ಗಾದ್ಯಾಂತ್ ಏಕ್ ದೀಸ್- 2024 ಅನ್ನು ಆಯೋಜಿಸಿದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಕಣಜಾರಿನ ಅವರ್ ಲೇಡಿ ಆಫ್ ಲೂರ್ಡ್ಸ್ ಚರ್ಚ್ ನ ಧರ್ಮಗುರು ರೆ.ಪಾ. ಹೆರಾಲ್ಡ್ ಪಿರೇರಾ ವಹಿಸಿ ಮಾತನಾಡಿ ಸಮಾಜದಲ್ಲಿ ಪುರುಷರ ಪಾತ್ರದ ಕುರಿತು ಮತ್ತು ಚೇತನ ಪುರುಷರ ಮಹಾಸಂಘ ಸಮಾಜದ ಒಳಿತಿಗಾಗಿ ಮತ್ತು ಅಭಿವೃದ್ಧಿಗೆ ನೀಡಬೇಕಾದ ಕೊಡುಗೆಯ ಕುರಿತು ಮಾತನಾಡಿದರು.
ಎಲಿಜಾ ಡಿಸೋಜಾ, ಜೀವನ್ ಜ್ಯೋತಿ, ಕ್ರೀಡಾಕೂಟವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿಯ ಸಮನ್ವಯ ಪುರುಷರ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಅಲ್ಟನ್ ರೆಬೆರೋ ಭಾಗವಹಿಸಿ ವಾರ್ಷಿಕೋತ್ಸವಕ್ಕಾಗಿ ಸಮೂಹವನ್ನು ಅಭಿನಂದಿಸಿದರು ಮತ್ತು ಮುಂಬರುವ ವರ್ಷವು ಚೇತನಾ ಮಹಾಸಂಘಕ್ಕೆ ಶುಭ ಹಾರೈಸಿದರು.
ಸಂಪದ ಉಡುಪಿಯ ಸಂಯೋಜಕ ಸ್ಟಾನ್ಲಿ ಫೆರ್ನಾಂಡಿಸ್ ಅವರು ಪುರುಷರ ಗುಂಪಿನ ಅಭಿವೃದ್ಧಿ ಕುರಿತು ಮಾತನಾಡಿದರು. ಕಣಜಾರ್ ಚರ್ಚ್ 20 ಆಯೋಗದ ಸಂಯೋಜಕ ಮೇಬಲ್ ನಜರೆತ್ ಮತ್ತು ರೆ.ಫಾ. ಜೋಯಲ್ ಅರಾನ್ಹಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚೇತನಾ ಪುರುಷರ ಮಹಾಸಂಘದ ಅಧ್ಯಕ್ಷ ಆಂತೊನಿ ಮಿರಾಂದಾ ಸ್ವಾಗತಿಸಿದರು.
ಪುರುಷರ ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಎಡ್ವಿನ್ ಮೆಂಡೋನ್ಸಾ ಅವರು ಕ್ರೀಡಾ ಚಟುವಟಿಕೆಗಳನ್ನು ನಿರ್ವಹಿಸಿದರು.
ಕೋಶಾಧಿಕಾರಿ ನೆಲ್ಸನ್ ಮಚಾದೊ ಸಹಕರಿಸಿದರು.
ಚೇತನ ಪುರುಷರ ಮಹಾಸಂಘದ ಖಜಾಂಚಿ ವಿಲ್ಸನ್ ನೊರೊನ್ಹಾ ಅವರು ಕ್ರೀಡಾಕೂಟಗಳ ಪಂದ್ಯಾವಳಿಗಳನ್ನು ನಿರ್ವಹಿಸಿ ಕಾರ್ಯಕ್ರಮದ ಪ್ರಾಯೋಜಕರು ಹಾಗೂ ದಾನಿಗಳ ಹೆಸರನ್ನು ವಾಚಿಸಿದರು,
ಕಾರ್ಯದರ್ಶಿ ರೊನಾಲ್ಡ್ ನಜರೆತ್ ವಂದಿಸಿದರು.
ವಿವಿಧ ವಯೋಮಾನದವರಿಗೆ ಹಲವು ಕ್ರೀಡಾಕೂಟಗಳು ನಡೆದಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಟಗಳನ್ನು ಆನಂದಿಸಿದರು.
ವಿಜೇತರಿಗೆ ಅಂತೊನಿ ಮಿರಾಂದಾ, ಅದ್ಯಕ್ಷರು, ಚೇತನಾ ಪುರುಷರ ಮಹಾಸಂಘ ಕಣಾಜಾರು, ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಅನಿತಾ ಕ್ವಾಡ್ರಸ್ ಮತ್ತು ಕಣಜಾರು ಚರ್ಚ್ನ ಸಾಮಾಜಿಕ ಅಭಿವೃದ್ಧಿ ಆಯೋಗದ ಸಂಯೋಜಕಿ ಮೇಬಲ್ ನಜರೆತ್ ಅವರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಪ್ರಕಾಶ್ ಮಾರ್ಟಿಸ್ ಮತ್ತು ಜಾರ್ಜ್ ಡೇಸಾ ಕಾರ್ಯಕ್ರಮವನ್ನು ಸಂಯೋಜಿಸಿದರು.














