ಸಾಧಿಸಿದ ಛಲ ಯುವಜನತೆಗೆ ಮಾದರಿ
ಕಾರ್ಕಳ : ಬಿಜೆಪಿ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ
ಕಾರ್ಕಳ: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅಂಬೇಡ್ಕರ್ ಅವರು ಕಡು ಬಡತನ ಮತ್ತು ಸಾಮಾಜಿಕ ಅಸಮಾನತೆಯ ನಡುವೆಯೂ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದು ಸಾಧಿಸಿದ ಛಲ ಇಂದಿನ ಯುವಜನತೆಗೆ ಮಾದರಿಯಾಗಿದೆ ಎಂದರು. ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗಿನ ವಿರುದ್ಧ ಅವರು ನಡೆಸಿದ ಹೋರಾಟ ಅಮೋಘವಾಗಿದ್ದು, ಅವರ ವ್ಯಕ್ತಿತ್ವವನ್ನು ಕೇವಲ ಸಂವಿಧಾನ ರಚನೆಗೆ ಮಾತ್ರ ಸೀಮಿತಗೊಳಿಸದೇ ಸಮಗ್ರವಾಗಿ ಅರಿಯಬೇಕಾಗಿದೆ ಎಂದು ಹೇಳಿದರು.
- ಅದೇ ವೇಳೆ, ಅಂಬೇಡ್ಕರ್ ಅವರ ರಾಜಕೀಯ ಜೀವನದಲ್ಲಿ ಎದುರಾದ ಅಡೆತಡೆಗಳನ್ನು ಉಲ್ಲೇಖಿಸಿದ ಅವರು, ಅವರ ವಿರುದ್ಧ ರಾಜಕೀಯವಾಗಿ ನಡೆದ ಘಟನೆಗಳನ್ನು ಇತಿಹಾಸದಲ್ಲಿ ಮರೆಯಲಾಗದು ಎಂದು ಅಭಿಪ್ರಾಯಪಟ್ಟರು.





































