ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Picture of RB NEWS

RB NEWS

Bureau Report

ಸಾಣೂರು : ಎಸ್ಸೆಸೆಲ್ಸಿ-ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕಾರ್ಕಳ: ರಾಜ್ಯ ಅತ್ಯುತ್ತಮ ಯುವಮಂಡಲ ಪ್ರಶಸ್ತಿ
ಪುರಸ್ಕೃತ ಯುವಕ ಮಂಡಲ ಸಾಣೂರು ಮತ್ತು ರಾಜೇಶ್ವರಿ
ಏಜುಕೇಶನ್ ಫೌಂಡೇಶನ್ ಸಾಣೂರು ಸಹಯೋಗದಲ್ಲಿ ಸಾಣೂರು
ಗ್ರಾಮದ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರಿನ
ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ೨೦೨೩-೨೪ನೇ ಸಾಲಿನ ಶೇಕಡಾ ೯೦
ಕ್ಕಿಂತ ಹೆಚ್ಚು ಅಂಕ ಪಡೆದ
ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಹಾಗೂ ಉತ್ತಮ ಫಲಿತಾಂಶ
ದಾಖಲಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ
ವಿಭಾಗದ ಎಲ್ಲಾ ಮಕ್ಕಳಿಗೆ ಗೌರವ ಅಭಿನಂದನೆ
ಕಾರ್ಯಕ್ರಮವು ರಿಜೆನ್ಸಿ ಹಾಲ್ ಮುರತ್ತಗಡಿ ಸಾಣೂರು ಇಲ್ಲಿ
ಭಾನುವಾರ ನಡೆಯಿತು.


ಮೂಡಬಿದ್ರೆಯ ಲೆಕ್ಕಪರಿಶೋಧಕ ಉಮೇಶ್ ರಾವ್ ಮಿಜಾರ್
ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳ ಮುಂದಿನ
ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.
ರಿಜೆನ್ಸಿ ಹಾಲ್ ನ ಮಾಲಕರದ ರಮೇಶ್ ಸಾಲಿಯಾನ್ ಕಾರ್ಯಕ್ರಮ
ಉದ್ಘಾಟಿಸಿದರು.


ರಾಜ್ಯದಲ್ಲಿ ೫ನೇ ರಾಂಕ್ ಪಡೆದ ಸಾಣೂರು ಸರಕಾರಿ ಪದವಿ ಪೂರ್ವ
ಕಾಲೇಜು ಪ್ರೌಢ ಶಾಲಾ ವಿಭಾಗದ ಪ್ರತೀಕ್ ಜೈನ್
ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ೧೩ ವಿದ್ಯಾರ್ಥಿಗಳು ಮತ್ತು
ಪಿಯುಸಿ ವಿಭಾಗದಲ್ಲಿ ೩೫ ವಿದ್ಯಾರ್ಥಿಗಳು ಸೇರಿ ೪೮ ಮಂದಿ ವಿದ್ಯಾರ್ಥಿಗಳಿಗೆ
ಅಭಿನಂದಿಸಲಾಯಿತು. ಹಾಗೂ ಉತ್ತಮ ಫಲಿತಾಂಶಕ್ಕೆ ಸಾಣೂರು
ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ
ವಿಭಾಗದ ೧೩೦ ಮಕ್ಕಳಿಗೆ ಪುಸ್ತಕ ಮತ್ತು ಹೂವಿನೊಂದಿಗೆ
ಗೌರವ ಅಭಿನಂದನೆ ಸಲ್ಲಿಸಲಾಯಿತು. ಹಿರಿಯ ಸದಸ್ಯರಾದ ಅಲೆಕ್ಸ್
ಡಿಸಿಲ್ವ ಇವರನ್ನು ಗೌರವಿಸಲಾಯಿತು.


ಸಾಣೂರು ರಾಜೇಶ್ವರಿ ಎಜುಕೇಶನ್ ಫೌಂಡೇಶನ್ ಇದರ
ಮ್ಯಾನೇಜಿಂಗ್ ಡೈರೆಕ್ಟರ್ ದೇವಿಪ್ರಸಾದ್ ಶೆಟ್ಟಿ, ಸಾಣೂರು ಸರಕಾರಿ
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಚೇತಾ ಕಾಮತ್,
ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಗಣೇಶ್ ಮೊಗವೀರ,
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ
ಕಾರ್ಕಳ ಇಲ್ಲಿಯ ವಿಚಕ್ಷಣಾಧಿಕಾರಿ ಶಾರದಾ ರೈ, ಕಾಲೇಜು
ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಅಶೋಕ್ ಶೆಟ್ಟಿ, ಮಾಜಿ
ಅಧ್ಯಕ್ಷರುಗಳಾದ ಶಂಕರ್ ಶೆಟ್ಟಿ, ಗಣೇಶ್ ನಾಯಕ್
ಸಾಣೂರು, ಮಹೇಶ್ ಶೆಟ್ಟಿಗಾರ್, ಪ್ರಸಾದ್ ಪೂಜಾರಿ, ಜಗದೀಶ್
ಕುಮಾರ್, ಪ್ರಕಾಶ್ ಮಡಿವಾಳ, ರಾಘು ಪೂಜಾರಿ, ಮಂಡಲದ
Àದಾಧಿಕಾರಿಗಳಾದ ಶುಭಕರ ಶೆಟ್ಟಿ, ರಾಜೇಶ್ ಪೂಜಾರಿ,
ಚಂದ್ರಹಾಸ್ ಪೂಜಾರಿ, ರೋಹಿತ್ ಆರ್. ಕೆ, ಪ್ರಶಾಂತ್ ಆಚಾರ್ಯ,
ಪ್ರಸನ್ನ ಆಚಾರ್ಯ ಸುನಿಲ್, ಸುದರ್ಶನ್ ನಾಯ್ಕ್, ಸತೀಶ
ಮಡಿವಾಳ, ಮುರಳಿದರ ಸುವರ್ಣ, ಜಯನ್ ಶೆಟ್ಟಿ, ಅಬ್ದುಲ್ ಗಪುರ್,
ಜಯಶೆಟ್ಟಿಗಾರ್, ಸೀತಾರಾಮ್, ವಿಘ್ನೇಶ್ ರಾವ್, ಪ್ರಶಾಂತ್ ಶೆಟ್ಟಿ,
ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು.


ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು.
ಕಾರ್ಯದರ್ಶಿ ಪ್ರಕಾಶ್ ರಾವ್ ವರದಿ ವಾಚಿಸಿದರು. ಮೋಹನ್ ಶೆಟ್ಟಿ
ಕಾರ್ಯಕ್ರಮ ನಿರೂಪಿಸಿದರು. ಪ್ರಮಿತ್ ಸುವರ್ಣ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top