[t4b-ticker]

ಸಾಧಕ ಮಹಿಳೆಗೆ ಸಂದ ಸನ್ಮಾನ

Picture of RB NEWS

RB NEWS

Bureau Report

 ಕಾರ್ಕಳ: ಪ್ರತಿಷ್ಠಿತ ಸ್ಕೌಟ್ ಗೈಡ್ ಸಂಸ್ಥೆಯ ಉಪಾಧ್ಯಕ್ಷರು ರಾಷ್ಟ್ರಮಟ್ಟದ ತರಬೇತಿದಾರರಾಗಿರುವ  ಕಾರ್ಕಳದ  ಸಾವಿತ್ರಿ ಮನೋಹರ್ ಎ ಎಲ್ ಟಿ ಗೈಡ್ ಕ್ಯಾಪ್ಟನ್ ಇವರ 39 ವರ್ಷಗಳ ಸಾರ್ಥಕ ಸೇವೆಯನ್ನು  ಗಮನಿಸಿದ ಭಾರತ್ ಸ್ಕೌಟ್ ಗೈಡ್ಸ್ ನ ರಾಜ್ಯ ಸಂಸ್ಥೆಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ ರವರ ಮಾರ್ಗದರ್ಶನದಲ್ಲಿ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ರಾಜ್ಯ ಆಯುಕ್ತರುಗಳ ಸಮಾವೇಶದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ  ರಾಜ್ಯ ಪ್ರಶಸ್ತಿ ನೀಡಿ ಗೌರವಿದಲಾಯಿತು.

 ನಿವೃತ್ತಿಯ ನಂತರವೂ ಸಮಾಜ ಸೇವೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು

ಸಾಹಿತಿಯಾಗಿ 24 ಪುಸ್ತಕಗಳನ್ನು ಬರೆದಿರುವ ಸಾವಿತ್ರಿ ಮನೋಹರ್ ನಮ್ಮ ಸ್ಕೌಟ್ ಸಂಸ್ಥೆಗೆ ಒಂದು ಆಧಾರಸ್ತಂಭ ಅವರು 75ರ ಇಳಿವಯಸ್ಸಿನಲ್ಲಿ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುತ್ತಾ ಗೈಡ್ ನಿಯಮವನ್ನು ಪಾಲಿಸುತ್ತಾ ಎಲ್ಲರಿಗೂ ಮಾದರಿಯಾಗಿದ್ದರು.

ಇವರ ಕಾರ್ಯದಕ್ಷತೆಗೆ ರಾಜ್ಯ ಗೈಡ್ ಆಯುಕ್ತೆ ಗೀತಾ ನಟರಾಜ್ ಮತ್ತು ಜೊತೆ ಕಾರ್ಯದರ್ಶಿ ರಾಮಲತಾ ಪ್ರಶಂಶಿಸಿದ್ದಾರೆ‌.

ಸಂಘಟನಾ ಆಯುಕ್ತೆ ಮಂಜುಳಾ ಕಾರ್ಯಕ್ರಮ ಸಂಘಟಿಸಿದ್ದರು. ದಾವಣಗೆರೆ ಜಿಲ್ಲಾ ಸಂಸ್ಥೆ ಕಾರ್ಯಕ್ರಮದ ಪ್ರಾಯೋಜಿಸಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top