ಸಾಣೂರು : ಶಿಕ್ಷಕರ ಬೀಳ್ಕೊಡುಗೆ

Picture of RB NEWS

RB NEWS

Bureau Report

ಸಾಣೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರು ಇಲ್ಲಿ ಸುದೀರ್ಘ 24 ವರ್ಷಗಳ ಕಾಲ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ತಮ್ಮ ಸೇವೆಯನ್ನು ನೀಡಿ ಇದೀಗ ಪದೋನ್ನತಿ ಹೊಂದಿ ಇರ್ವತ್ತೂರು ಶಾಲೆಗೆ ವರ್ಗಾವಣೆಗೊಂಡಿರುವ ಶಾಲೆಯ ಶಿಕ್ಷಕಿ ಕಲಾವತಿ ಹಾಗೂ ಸರಕಾರಿ ಕಿರಿಯ ಪ್ರಾ. ಶಾಲೆ ಮುದ್ದಣ್ಣ ನಗರ ಸಾಣೂರು ಇಲ್ಲಿ ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರಾದ ಶ್ರೀ ಸುಧೀರ್ ನಾಯಕ್ ಇವರಿಗೆ ಬೀಳ್ಕೊಡುಗೆ ಸಮಾರಂಭವು ಸುವರ್ಣ ಗ್ರಾಮೋದಯ ಸೌಧದಲ್ಲಿ (ಪಂಚಾಯತ್ ಹಾಲ್ ) ಇಲ್ಲಿ ನಡೆಯಿತು.

ಈಶಾ ವ್ಯಾಸಂ ಟ್ರಸ್ಟ್ (ರಿ.) ದೆಂದಬೆಟ್ಟು ಸಾಣೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರು ಶಾಲಾಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘ, ಸಾಣೂರು ಗ್ರಾಮದ ವಿವಿಧ ಸಂಘ ಸಂಸ್ಥೆಗಳು, ಸಾಣೂರಿನ ನಾಗರಿಕ ಬಂಧುಗಳಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಧ್ಯಕ್ಷತೆಯನ್ನು ಶ್ರೀ ಶ್ರೀರಾಮ ಭಟ್ ಪ್ರಧಾನ ಅರ್ಚಕರು ವಹಿಸಿದ್ದರು. ಅತಿಥಿಗಳಾಗಿ ಸಾಣೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ವಿಶ್ವನಾಥ್, ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಯುವರಾಜ್ ಜೈನ್, ಸಾಣೂರು ನರಸಿಂಹ ಕಾಮತ್, ದೇವಾನಂದ್ ಶೆಟ್ಟಿ, ಮಾಲಿನಿ ಎನ್ ರೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಂತೋಷ್ ಪೂಜಾರಿ, ಎಸ್ ಸತ್ಯಾರ್ಥಿ, ಪುರುಷೋತ್ತಮ ಗೌಡ ಇವರ ಉಪಸ್ಥಿತಿಯಲ್ಲಿ ಬೀಳ್ಕೊಡುಗೆ ಸಮಾರಂಭವು ನೆರವೇರಿತು. ಸಮ್ಮಾನ ಪತ್ರವನ್ನು ಪ್ರಕಾಶ್ ರಾವ್ ಹಾಗೂ ಹರಿನಾಕ್ಷಿ ಇವರು ವಾಚಿಸಿದರು.

ಮುಖ್ಯೋಪಾಧ್ಯಾಯ ರಂಗಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ನಿರ್ಮಲ ಡಿಮೆಲ್ಲೋ ಧನ್ಯವಾದ ವಿತ್ತರು. ಪಂಚಾಯತ್ ನಿಕಟ ಪೂರ್ವ ಸದಸ್ಯ ಕರುಣಾಕರ ಕೋಟ್ಯಾನ್ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top