




ಸಾಣೂರು ಯುವಕ ಮಂಡಲ : ಗ್ರಾಮೀಣ ಮಟ್ಟದ ಕ್ರಿಕೆಟ್ ತಂಡಗಳ YMS TROPY -2024
ಕಾರ್ಕಳ : ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಇದರ 71ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಮೀಣ ಮಟ್ಟದ ಆಹ್ವಾನಿತ ಕ್ರಿಕೆಟ್ ತಂಡಗಳ YMS TROPY 2024 ಪಂದ್ಯಾಟವು ಕಾಂತಾವರ ಪ್ರಕೃತಿ ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಜರುಗಿತು.

ಪಂದ್ಯಾಟದ ಉದ್ಘಾಟನೆಯನ್ನು ಸಂತೋಷ್ ಕೋಟ್ಯಾನ್ ಪಿಲಿಕಲ್ಲು ನೆರವೇರಿಸಿದರು.
ಪ್ರಕೃತಿ ನ್ಯಾಷನಲ್ ಸ್ಕೂಲ್ ಇದರ ಆಡಳಿತಧಿಕಾರಿ ಮಧುಸೂದನ್ ಇವರು ಕ್ರಿಕೆಟ್ ಕ್ರೀಡೆಯೊಂದಿಗೆ ಎಲ್ಲಾ ಕ್ರೀಡೆಗಳಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಹೇಳುತ್ತಾ ಆಟಗಾರರಿಗೆ ಶುಭ ಹಾರೈಸಿದರು.
ಕ್ರೀಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಲದ ಅಧ್ಯಕ್ಷ ಪ್ರಸಾದ್ ಶೆಟ್ಟಿವಹಿಸಿದ್ದರು.
ಪ್ರಥಮ ಬಹುಮಾನವನ್ನು ಕಟಿಲೇಶ್ವರಿ ಸಾಣೂರು, ದ್ವಿತೀಯ ಬಹುಮಾನವನ್ನು ವಿ.ಕೆ ಚಕ್ರವರ್ತಿ ನಿಟ್ಟೆ ಇವರು ಮಡಿಲಿಗೇರಿಸಿಕೊಂಡರು.
ಕ್ರೀಡಾ ಕಾರ್ಯದರ್ಶಿಗಳಾದ ವಿದ್ಯಾನಂದ, ಪ್ರವೀಣ್ ಶೆಟ್ಟಿ ಪಂದ್ಯಾಟವನ್ನು ನಡೆಸಿಕೊಟ್ಟರು. ಮೋಹನ್ ಶೆಟ್ಟಿ ನಿರ್ವಹಿಸಿದರು.
ಮಾಜಿ ಅಧ್ಯಕ್ಷರಾದ ಶಂಕರ್ ಶೆಟ್ಟಿ, ಮಹೇಶ್ ಕುಮಾರ್, ಜಗದೀಶ್ ಕುಮಾರ್, ಉಪಾಧ್ಯಕ್ಷ ಹರೀಶ್ ರಾವ್ , ಕಾರ್ಯದರ್ಶಿ ಪ್ರಕಾಶ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್ ಪೂಜಾರಿ ಹಾಗೂ ಮಂಡಲದ ಸದಸ್ಯರು ಭಾಗವಹಿಸಿದ್ದರು.
ಪ್ರಕೃತಿ ನ್ಯಾಷನಲ್ ಸ್ಕೂಲ್ ಕಾಂತಾವರ, ಕರಣ್ ಸಾಲಿಯಾನ್ ಭಾರ್ಗವಿ ಸಾಣೂರು, ಸಂತೋಷ್ ಕೋಟ್ಯಾನ್ ಪಿಲಿಕಲ್ಲು ಸಾಣೂರು, ದಾಮೋದರ್ ಶೆಣೈ ‘ ರಾಮಯ್ಯ ” ಸಾಣೂರು, ಸುನಿಲ್ ಶೆಟ್ಟಿ ಕೆಳಗಿನಮನೆ ಸಾಣೂರು, ಸೀತಾರಾಮ್ ವರ್ಷ ಡಿಜಿಟಲ್ ಮತ್ತು ರಿಧಿತ್ ಸೈಬರ್ ಸೆಂಟರ್ ಸಾಣೂರು, ಮನೀಶ್ ನಾಯ್ಕ್ ಕಮಲಾಕ್ಷ ನಗರ ಸಾಣೂರು ಇವರ ಸಹಕಾರದೊಂದಿಗೆ ಪಂದ್ಯಾಟ ಜರುಗಿತು.
















