ಕಾರ್ಕಳ: ಸಾಣೂರು, ಮೊಹಿದ್ದೀನ್ ಜುಮ್ಮಾ ಮಸೀದಿ ಇದರ ನವೀಕರಣದ ಹೊಸ ಕಟ್ಟಡ ಇದರ ಮೇಲ್ಚಾವಣಿ ವಕ್ಫು ಕಾರ್ಯಕ್ರಮವನ್ನು ಧಾರ್ಮಿಕ ಮುಖಂಡರಾದ ಖಲಿಯರ್ ಮಾಣಿ ಉಸ್ತಾದ್ ನೆರವೇರಿಸಿದರು.

ಮೇ 20ರಂದು ನೆರವೇರಿದ ಲುಹರ್ ನಮಾಜ್ ನಂತರ ಹೊಸ ಮಸೀದಿಯ ಮೇಲ್ಚಾವಣಿಯನ್ನು ವಕ್ಫು ಮಾಡಲಾಯಿತು,ಸುಮಾರು ಒಂದು ಕೋಟಿಗೂ ಮಿಕ್ಕಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆದಿರುತ್ತದೆ. ಮಾರ್ಹೂಂ ಬೇಕಲ್ ಉಸ್ತಾದ್ ಶಿಲಾನ್ಯಾಸ ನೆರವೇರಿಸಿದರು.
ಮೇಲ್ಚಾವಣಿ ಕೆಲಸ ಮುಗಿದಿದೆ, ಕೆಳಗಿನ ಮಸೀದಿಯ ಕಾಮಗಾರಿಗಳು ಸೇರಿದಂತೆ ಅಂತಿಮ ಹಂತದ ಕಾಮಗಾರಿ ಮುಂದುವರಿಯಲಿದೆ.ಐಡಿಯಲ್ ಅಬ್ದುಲ್ ರಹಮಾನ್, ಆಸಿಫ್ ಆಪತ್ಬಾಂಧವ ಮೊದಲಾದವರು ಉಪಸ್ಥಿತರಿದ್ದರು.






































