ರಾ.ಹೆ _169 : ಅವೈಜ್ಞಾನಿಕ ಕಾಮಗಾರಿಯ ದುರವಸ್ಥೆ:
ಸಾಣೂರು ಮುರತಂಗಡಿ ಮಳೆ ನೀರು ಮನೆಗೆ ನುಗ್ಗಿ ಅಪಾರ ಹಾನಿ
ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 169 ಮುರತಂಗಡಿ -ಶುಂಠಿ ಗುಡ್ಡೆ ಸಂಪರ್ಕ ರಸ್ತೆ ತಿರುವಿನಲ್ಲಿ ಮೇ 20 ಸೋಮವಾರ ರಾತ್ರಿ ಏಳು ಗಂಟೆಗೆ ಸುರಿದ ಭಾರಿ ಮಳೆಗೆ ಜಲಾವೃತಗೊಂಡು ಮನೆಯೊಳಗೆ ಮಳೆ ನೀರು ಸೇರಿಕೊಂಡು ಬೆಲೆ ಬಾಳುವ ಪರಿಕರಗಳ ಹಾನಿಗೊಳಗಾಗಿದೆ. ಕಂಪೌಂಡ್ ಧರೆಶಾಯಿಯಾಹಿಗೆ, ಬೆಳೆ ಹಾನಿಯಾದ ಬಗ್ಗೆ ಮಾಹಿತಿ ಲಭಿಸಿದೆ.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಿಸದೇ ಇರುವುದು ಸಮಸ್ಸೆಗೆ ಮೂಲ ಕಾರಣವೆನ್ನಲಾಗಿದೆ.
ಎರಡು ವಾರದ ಹಿಂದೆ ಸುರಿದಿದ್ದ ಪ್ರಥಮ ಮಳೆಗೆ ಶುಂಠಿ ಗುಡ್ಡೆ ಸಂಪರ್ಕ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿಯಾಗಿ, ಆ ಬಳಿಕ ರಸ್ತೆಯನ್ನು ಎತ್ತರಿಸಿ ಡಾಮರೀಕರಣ ಗೊಳಿಸಲಾಗಿತ್ತು.
2023 ಡಿಸೆಂಬರ್ 19 ರಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ರವರು ಪಂಚಾಯತ್ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದರು. ಅದೇ ವೇಳೆಗೆ ರತ್ನಾಕರ್ ಕಾಮತ್ ರವರ ಮನೆಯ ಮುಂಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗಮನ ಸೆಳೆದು ಕೂಡಲೇ ಚರಂಡಿ ನಿರ್ಮಿಸುವಂತೆ ನಿರ್ದೇಶನ ನೀಡಿದ್ದರು.
ಸ್ಥಳೀಯ ಪಂಚಾಯತ್ ಆಡಳಿತ ಕೂಡಲೇ ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆ ಒತ್ತಾಯಿಸುತ್ತಿದ್ದರು.
ಶಾಸಕರ ಮಾತಿಗೆ ಬೆಲೆ ನೀಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿ ಶುರುವಾದ ನಂತರದ ದಿನಗಳಲ್ಲಿ ಸಾಣೂರು ವ್ಯಾಪ್ತಿಯಲ್ಲಿ ಒಂದಲ್ಲ ಒಂದು ಸಮಸ್ಸೆಗಳು ನಾಗರಿಕರ ಬದುಕಿನ ಮೇಲೆ ಚೆಲ್ಲಾಟವಾಡುತ್ತಿತ್ತು.
ನಾಗರಿಕರ ಒತ್ತಾಯದ ಮೇರೆಗೆ ಶಾಸಕ ಸುನೀಲ್ ಕುಮಾರ್ ಮುತುವರ್ಜಿ ವಹಿಸಿ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ, ಪೊಲೀಸ್ ಇಲಾಖೆ, ಸೇರಿದಂತೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ಸಭೆ ನಡೆದ ಸಿದ್ದರು.
ಸಮಸ್ಸೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಮುತುವರ್ಜಿ ವಹಿಸಿದ್ದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆ , ಯಾವುದೇ ಮುಂಜಾಗ್ರತಾ ಅಕ್ರಮಗಳನ್ನು ಕೈಗೊಳ್ಳದೆ ಇದೀಗ 6 ತಿಂಗಳ ಬಳಿಕ ಪ್ರಥಮ ಮಳೆಗೆ ರತ್ನಾಕರ ಕಾಮತ್ ರವರ ಮನೆಯ ಮುಂಭಾಗದ ಗೋಡೆ ಕುಸಿದು, ಮನೆಯ ಅಂಗಳ ಮತ್ತು ಮನೆಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯವರ ಅವೈಜ್ಞಾನಿಕ ಕಾಮಗಾರಿಗೆ ಕೊನೆಯೆಂದು…
ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಂತೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ವಿಭಾಗದವರು ನಡೆಸುತ್ತಿದ್ದಾರೆಯೇ ಪ್ರಶ್ನೆಗಳು ಇಲ್ಲಿನ ನಾಗರಿಕರಲ್ಲಿ ಕಾಡುತ್ತಿದೆ.





ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷರ ಯುವರಾಜ್
ಜೈನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು ,ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಸಂತೋಷ್ ಸುವರ್ಣ ನೇತೃತ್ವದಲ್ಲಿ ಜೆಸಿಬಿಯಿಂದ ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿ ಮಳೆನೀರಿನ ರಭಸಕ್ಕೆ ತಾತ್ಕಾಲಿಕ ತಡೆ ಒಡ್ಡಿ ಇನ್ನಷ್ಟು ಮಳೆ ನೀರು ನುಗ್ಗಿ ಮನೆಗೆ ಹಾನಿಯಾಗುವುದನ್ನು ತಡೆಗಟ್ಟುವ ಮಾರ್ಗೋಪಾಯಗಳನ್ನು ಕಂಡುಕೊಂಡರು.






































