ಸಾಣೂರು : ಪ್ರಚಾರದ ಸ್ಟಿಕರ್ ಬಿಡುಗಡೆ

Picture of RB NEWS

RB NEWS

Bureau Report

ಕಾರ್ಕಳ : ಮಾರ್ಚ್ 23 ರಿಂದ 31 ವರೆಗೆ ಸಾಣೂರು ನಡ್ಯೋಡಿ ಬೆಟ್ಟ ಶ್ರೀ ಕ್ಷೇತ್ರ ಧರ್ಮರಸು ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜರಗಲಿರುವ ಜೀರ್ಣೋದ್ದಾರ ಪುನರ್ ಪ್ರತಿಷ್ಠೆ ಬ್ರಹ್ಮಕಲಶ ಹಾಗೂ ವಾರ್ಷಿಕ ನೇಮೋತ್ಸವ ಜರುಗಲಿದೆ.
ಅದರ ಅಂಗವಾಗಿ ಪ್ರಚಾರದ ಸ್ಟಿಕರ್ ಅನ್ನು ಸಾಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರಾಗಿರುವ ವೇದಮೂರ್ತಿ ಶ್ರೀರಾಮ್ ಭಟ್ ಮತ್ತು ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸಾಣೂರುಗುತ್ತು ಪ್ರಭಾತ್ ನಾಯ್ಕ್ ಬಿಡುಗಡೆ ಗೊಳಿಸಿದರು.

ಇದೇ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಎಸ್ ಕೋಟ್ಯಾನ್, ಜೀರ್ಣೋದ್ದಾರ ಸಮಿತಿಯ ಕೋಶಾಧಿಕಾರಿ ಎಂ ದಯಾನಂದ ಶೆಟ್ಟಿ ಸಾಣೂರು ಗುತ್ತು, ಪ್ರದೀಪ್ ನಾಯ್ಕ್, ಪ್ರಸನ್ನ ನಾಯ್ಕ್, ದೇವಾನಂದ್ ಶೆಟ್ಟಿ ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳಾದ ಶಂಕರ್ ಶೆಟ್ಟಿ ಮೋಹನ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಶಾಂತರಾಮ್ ಶೆಟ್ಟಿ, ಶೇಖರ್ ಶೆಟ್ಟಿ, ಪ್ರಕಾಶ್ ರಾವ್, ರಾಜೇಶ್ ಪೂಜಾರಿ, ಪ್ರಶಾಂತ್ ಆಚಾರ್ಯ, ಜಯನ್ ಶೆಟ್ಟಿ, ದಿಲೀಪ್ ಶೆಟ್ಟಿ, ಸುದರ್ಶನ್ ಶೆಟ್ಟಿಗಾರ್ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top