







ಸಾಕ್ಷ್ಯ ಹೇಳಿಕೆಗೆ ಕಾರ್ಕಳ ನ್ಯಾಯಾಲಯಕ್ಕೆ ಹಾಜರಾದ ಅಣ್ಣಾಮಲೈ

ಕಾರ್ಕಳ ನ್ಯಾಯಾಲಯ
*******************

ಅಣ್ಣಾಮಲೈ
****************

ಪ್ರಕರಣ ಆರೋಪಿ ಟಿ.ಕೆ.ಬಿಜು
*************************
ಕಾರ್ಕಳ : 2014ರಲ್ಲಿ ಅಕ್ರಮ ಸ್ಪೋಟಕ ಪ್ರಕರಣದ ತನಿಖೆ ವಿಚಾರಣೆಗಾಗಿ ಕಾರ್ಕಳ ನ್ಯಾಯಾಲಯಕ್ಕೆ ಅಂದಿನ ಎಎಸ್ಪಿ ಅಣ್ಣಾಮಲೈ ಸೋಮವಾರದಂದು ಹಾಜರಾಗಿ ಸಾಕ್ಷ್ಯ ಹೇಳಿಕೆ ನೀಡಿದ್ದಾರೆ.
2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಉಡುಪಿ(ಸಂಚಾರಿ ನ್ಯಾಯಾಲಯ ಕಾರ್ಕಳ) ದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಕೇರಳ ಮೂಲದ ಟಿ.ಕೆ.ಬಿಜು ಥೋಮಸ್ ಎಂಬಾತ ಪ್ರಕರಣದ ಆರೋಪಿಯಾಗಿದ್ದು, ಕಾರ್ಕಳದಲ್ಲಿ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಅಣ್ಣಾಮಲೈ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಅಕ್ರಮ ಸ್ಫೋಟಕ ಪತ್ತೆ ಹಚ್ಚಿ ಆರೋಪಿ ಟಿ.ಕೆ ಬಿಜು ನನ್ನು ಬಂಧಿಸಿದ್ದರು.
ಆರೋಪಿ ಟಿ.ಕೆ.ಬಿಜು ವಿರುದ್ಧ ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ, ಹೆಬ್ರಿ ಠಾಣೆಗಳಲ್ಲಿ ಒಟ್ಟು ಐದು ಪ್ರಕರಣ ದಾಖಲಾಗಿತ್ತು.
ಪೊಲೀಸ್ ಇಲಾಖೆಯಿಂದ ರಾಜಕೀಯಕ್ಕೆ…..
ಅಣ್ಣಾಮಲೈ ಅವರು ಕಾರ್ಕಳದಲ್ಲಿ ಎಎಸ್ಪಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಈ ನಡುವೆ ಪೊಲೀಸ್ ಇಲಾಖೆಗೆ ರಾಜೀನಾಮೆ ಸಲ್ಲಿಸಿದ ಅಣ್ಣಾಮಲೈ ಬಿಜೆಪಿ ಸದಸ್ಯತ್ವ ಪಡೆದು ತಮಿಳುನಾಡು ಬಿಜೆಪಿ ರಾಜ್ಯ ಅಧ್ಯಕ್ಷರಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಅಣ್ಣಾಮಲೈ ಚಾಟಿ ಬೀಸುವ ಹಾಗೂ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಇಳಿಸುವ ತನಕ ಪಾದರಕ್ಷೆ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದರು.
ತಾವು ಕಾರ್ಕಳದಲ್ಲಿ ಹೆಚ್ಚುವರಿ ಪೋಲಿಸ್ ಉಪಾಧೀಕ್ಷಕ(ಎಎಸ್ಪಿ) ರಾಗಿದ್ದ ಸಂದರ್ಭದಲ್ಲಿ ಸಲ್ಲಿಸಿದಂತಹ ಆರೋಪ ಪಟ್ಟಿಯ ಸಾಕ್ಷ್ಯ ವಿಚಾರಣೆಗಾಗಿ ಕಾರ್ಕಳ ನ್ಯಾಯಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಾದರಕ್ಷೆ ಇಲ್ಲದೇ ಬರಿಗಾಲಿನಲ್ಲಿ ಇದ್ದರು ಎಂಬುವುದು ಗಮನಾರ್ಹವಾಗಿದೆ.














