ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾಗಿ ಬೋಳ ಸದಾಶಿವ ಶೆಟ್ಟಿ ಆಯ್ಕೆ
ಕಾರ್ಕಳ : ಸಹಕಾರ ಭಾರತಿ ರಾಜ್ಯಾಧ್ಯಕ್ಷ ಪ್ರಭುದೇವ ಆರ್ ಮಾಗನೂರ್ ರವರು ಡಿಸೆಂಬರ್ 28 ಶನಿವಾರ 2024 ರಂದು ಉಡುಪಿ ಕಿಸಾನ್ ಸಭಾ ಸಭಾಂಗಣದಲ್ಲಿ ಜರುಗಿದ ಉಡುಪಿ ಜಿಲ್ಲಾ ಸಹಕಾರ ಭಾರತಿಜಿಲ್ಲಾ ಕಾರ್ಯಕಾರಿಣಿಯಲ್ಲಿ ರಾಜ್ಯದ ನೂತನ ಹಾಲು ಪ್ರಕೋಷ್ಟದ ಸಂಚಾಲಕರಾಗಿ ಬೋಳ ಸದಾಶಿವ ಶೆಟ್ಟಿ ಅವರ ಆಯ್ಕೆಯನ್ನು ಘೋಷಿಸಿ ಜವಾಬ್ದಾರಿಯನ್ನು ನೀಡಿದರು.
ಬೋಳ ಸದಾಶಿವ ಶೆಟ್ಟಿಯವರು ಕಳೆದ ಎರಡು ಅವಧಿಗಳಲ್ಲಿ ಉಡುಪಿ ಜಿಲ್ಲಾ ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯದ ನೂತನ ಪ್ರಧಾನ ಕಾರ್ಯದರ್ಶಿಗಳಾದ ಸಾಣೂರು ನರಸಿಂಹ ಕಾಮತ್ ಜಿಲ್ಲಾಧ್ಯಕ್ಷ ದಿನೇಶ್ ಹೆಗ್ಡೆ ,ರಾಜ್ಯ ಸಂಘಟನಾ ಪ್ರಮುಖ ಮಂಜುನಾಥ, ರಾಜ್ಯ ಮಹಿಳಾ ಪ್ರಮುಖ ವಿದ್ಯಾಪೈ ,ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಮಂಜುನಾಥ ಎಸ್ ಕೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೇಶ್ ನಾಯಕ್ ಹಾಗೂ ಸಂಘಟನಾ ಕಾರ್ಯದರ್ಶಿ ಸುಜಿತ್ ಶೆಟ್ಟಿಯವರು ಉಪಸ್ಥಿತರಿದ್ದರು.
,






































