ಸಹಕಾರ ಭಾರತಿ ಅಭ್ಯಾಸ ವರ್ಗ

Picture of RB NEWS

RB NEWS

Bureau Report

ಉಡುಪಿ : ಸಹಕಾರ ಭಾರತಿ ಬ್ರಹ್ಮಾವರ ತಾಲೂಕು ಅಭ್ಯಾಸ ವರ್ಗವು
ಮಾರ್ಚ್ 9 ಶನಿವಾರದಂದು ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದ ಉನ್ನತಿ ಯಲ್ಲಿ ಬೆಳಿಗ್ಗೆ
ಗಂಟೆ 10: 00 ರಿಂದ ಮಧ್ಯಾಹ್ನ 1:30 ಗಂಟೆಯವರೆಗೆ ನಡೆಯಲಿರುವುದು.

ಉದ್ಘಾಟನಾ ಸಮಾರಂಭ:
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ತಿಮ್ಮಪ್ಪ ಹೆಗಡೆ
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಲಿರುವರು.

ಬ್ರಹ್ಮಾವರ ತಾಲೂಕು ಸಹಕಾರ ಭಾರತಿ ಅಧ್ಯಕ್ಷ ಅಶೋಕ ಪ್ರಭುರವರು ಅಧ್ಯಕ್ಷತೆ ವಹಿಸಲಿರುವರು.

ಮುಖ್ಯ ಅತಿಥಿಗಳಾಗಿ ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ರಾಷ್ಟ್ರೀಯ ಮತ್ಸ್ಯ ಪ್ರಕೋಷ್ದದ ಸಹ_ಸಂಚಾಲಕರು ಹಾಗೂ ಸಹಕಾರಿ ವಕೀಲ‌ ಮಂಜುನಾಥ ಎಸ್ಕೆ, ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕ ಸಾಣೂರು ನರಸಿಂಹ ಕಾಮತ್ ರವರು ಹಾಗೂ ಸಹಕಾರ ಭಾರತೀ ಉಡುಪಿ ಜಿಲ್ಲಾ ಹಾಲು ಪ್ರಸವದ ಸಂಚಾಲಕರಾದ ಕನ್ನಾರು ಕಮಲಾಕ್ಷ ಹೆಬ್ಬಾರ್* ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಮಾಹಿತಿ ಶಿಬಿರ :
ಉದ್ಘಾಟನಾ ಸಮಾರಂಭದ ಬಳಿಕ ನಡೆಯಲಿರುವ ಮಾಹಿತಿ ಶಿಬಿರದಲ್ಲಿ ಸಹಕಾರ ಭಾರತಿಯ ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಸಹಕಾರ ಭಾರತಿ ಮೈಸೂರು ಪ್ರಾಂತ್ಯದ ಸಂಘಟನಾ ಪ್ರಮುಖ ಮೋಹನ್ ಕುಮಾರ್ ಕುಂಬಳೇಕರ್ ರವರು ಮಾಹಿತಿ ಮಾರ್ಗದರ್ಶನ ನೀಡಲಿರುವರು.

ಸಹಕಾರಿ ಕಾಯಿದೆ ಮತ್ತು ಸಹಕಾರಿ ಸಂಸ್ಥೆಗಳ ಆಡಳಿತ ನಿರ್ವಹಣೆಯ* ಬಗ್ಗೆ ಸಹಕಾರಿ ನವರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ಮಂಗಳೂರು ಇದರ ಅಧೀಕ್ಷಕರಾದ ಎನ್ .ಜೆ. ಗೋಪಾಲ್ ರವರು ಭಾಗವಹಿಸಿ, ಮಾತನಾಡಲಿರುವರು ಎಂದು ಸಹಕಾರ ಭಾರತಿ ತಾಲೂಕು ಘಟಕದ ಅಧ್ಯಕ್ಷ ಅಶೋಕ್ ಪ್ರಭು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top