ಎನ್ ಎಸ್ ಎಸ್ ವ್ಯಕ್ತಿತ್ವ ವಿಕಾಸನಕ್ಕೆ ಪೂರಕ
ವರದಿ: ಅನುಷ್ ಪಂಡಿತ್
ಮಂಗಳೂರು: ವಿಶ್ವ ವಿದ್ಯಾ ನಿಲಯ ಪ್ರಥಮ ದರ್ಜೆ ಕಾಲೇಜು ಮಂಗಳ ಗಂಗೋತ್ರಿಯಲ್ಲಿ ರಾಷ್ಟ್ರೀಯ ಸೇವಾಯೋಜನೆ ದಿನಾಚರಣೆ ಜರುಗಿತು.
ಮಂಗಳೂರು ವಿಶ್ವ ವಿದ್ಯಾನಿಲಯದ ನಿಕಟ ಪೂರ್ವ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ, ಹಂಪನಕಟ್ಟಾ ವಿ.ವಿ ಕಾಲೇಜಿನ ಪ್ರಾಣಿ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ ನಾಗರತ್ನ ಕೆ. ಎ ಉದ್ಘಾಟಿಸಿದರು.
ಅವರು ಮಾತನಾಡಿ ಗ್ರಾಮೀಣ ಅಭಿವೃದ್ಧಿಯನ್ನು ಯುವಕರ ಮೂಲಕ ನನಸು ಮಾಡುವ ಸಲುವಾಗಿ ಗಾಂಧಿಯವರ 100 ನೇ ಜನ್ಮದಿನಾಚರಣೆಯನ್ನು ಎನ್ ಎಸ್ ಎಸ್ ದಿನವನ್ನಾಗಿ ಆಚರಿಸಲಾಯಿತು. ಸಮಾಜ ಸೇವೆಯನ್ನು ಮಾಡುತ್ತಾ ನಮ್ಮ ವ್ಯಕ್ತಿತ್ವವನ್ನು ರೂಪಿಸುವ ನಿಟ್ಟಿನಲ್ಲಿ ಎನ್ ಎಸ್ ಎಸ್ ಸಹಾಯಕಾರಿ ಎಂದರು.






ನಾವು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೇ ಡಾ. ಪ್ರಿಯಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿ ಶೇಷ ಶಯನ ಎಚ್. ವಿ, ಉಪನ್ಯಾಸಕರುಗಳಾದ ಪವಿತ್ರ ಎಚ್, ಅಜಯ್ ಎಸ್. ಜೆ, ರೇಖಾ,ದಿವ್ಯ ಮೊಲ್,ಶಿಲ್ಪಾ ಮತ್ತಿರರು ಉಪಸ್ಥಿತರಿದ್ದರು.

































