ಸಮಾಜಮುಖಿ ಸತ್ಕಾರ್ಯದಲ್ಲಿ ಮಾದರಿಯಾದ ರೋಟರಿ ಕ್ಲಬ್ ಕಾರ್ಕಳ
ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ಜಿಸಿಐ ಕಾರ್ಕಳ ಶ್ರೀ ಬಾಲಾಂಜನೇಯ ಯುವಕ ಸಂಘ( ರಿ) ಮುರತ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ರಿಜೆನ್ಸೀಹಾಲ್ ಮುರತ್ತಂಗಡಿನಲ್ಲಿ ನಡೆಸಲಾಯಿತು.

ಸಾಣೂರು ಗ್ರಾಮದ ಆಯ್ಕೆ ಮಾಡಿದ ವಿಕಲಚೇತನರಿಗೆ ಸಹಾಯಧನವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರ ಠಾಣೆ ಠಾಣಾಧಿಕಾರಿಯಾಗಿರುವ ಸಂದೀಪ್ ಶೆಟ್ಟಿ, ಸುಬ್ರಹ್ಮಣ್ಯಹುರ್ಕೇರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ, ನಿವೃತ್ತ ಶಿಕ್ಷಕಿ ಹರ್ಷಿಣಿ ವಿಜಯರಾಜ ಶೆಟ್ಟಿ, ರಮೇಶ್ ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಜೆಸಿಐ ಕಾರ್ಕಳದ ಅಧ್ಯಕ್ಷ ಪ್ರಚಿತ್ ಕುಮಾರ್, ಬಾಲಾಂಜನೇಯ ಯುವಕ ಸಂಘದ ಅಧ್ಯಕ್ಷ ಮಾಧವ ಭಂಡಾರ್ಕರ್ ಸಮಾಜ ಸೇವಕ ರೋ. ಸಮದ್ ಖಾನ್ ಭಾಗವಹಿಸಿದ್ದರು.






- ಸಾಣೂರು ಗ್ರಾಮದ ಆಯ್ಕೆ ಮಾಡಿದ ವಿಕಲಚೇತನರಿಗೆ ಸಹಾಯಧನವನ್ನು ವಿತರಿಸಲಾಯಿತು.
- ಮುರತ್ತಂಗಡಿಯ ರಿಕ್ಷಾ ಚಾಲಕರಿಗೆ ಸಮವಸ್ತ್ರದ ವಿತರಣೆ ಮಾಡಲಾಯಿತು.
- ಬಾಲಾಂಜನೇಯ ಯುವಕ ಸಂಘಕ್ಕೆ ಟೀ ಶರ್ಟ್ ಅನ್ನು ಕೊಡುಗೆಯಾಗಿ ನೀಡಲಾಯಿತು.
- ಮುರತ್ತಂಗಡಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೊಡೆ ಮತ್ತು ಸ್ವಾತಂತ್ರ್ಯೋತ್ಸವದ ಧ್ವಜವನ್ನು ವಿತರಣೆ ಮಾಡಲಾಯಿತು.
- ಸಾಣೂರು ಗ್ರಾಮದ ನಾಲ್ಕು ಮಂದಿ ಲೈನ್ ಮ್ಯಾನ್ ಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
































