ಕಾರ್ಕಳ : ಮೌಲ್ಯಾಧಾರಿತ ಶಿಕ್ಷಣ ಪಡೆದು ಸ್ವಾವಲಂಬಿ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಅಶಕ್ತರರಿಗೆ ನೆರವಾಗುವುದು ಮಾನವೀಯತೆಯಾಗಿದೆ. ಸಮಾಜವು ಸ್ತ್ರೀಯರಿಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸಿದೆ. ಜೀವಿತಾವಧಿಯಲ್ಲಿ ಸಂತೋಷದಲ್ಲಿದ್ದು, ಅದರ್ಶಪ್ರಾಯರಾಗಬೇಕೆಂದು ಕ್ರೈಸ್ಟ್ ಕಿಂಗ್ ಚಚ್೯ನ ಧರ್ಮಗುರು ರೆ.ಫಾ. ಕ್ಲೆಮೆಂಟ್ ಮಸ್ಕರೇನ್ಹಾಸ್ ಹೇಳಿದರು.
ಕ್ರೈಸ್ಟ್ ಕಿಂಗ್ ಸಭಾ ಭವನದಲ್ಲಿ ಮಾಚ್ ೯ 10ರಂದು ಮಹಿಳಾ ಪಂಗಡಗಳ ವತಿಯಿಂದ ಆಯೋಜಿಸಿದ ಮಹಿಳಾ ದಿನಾಚರಣೆ ಸಾಂಸ್ಕೃತಿಕ ಹಾಗೂ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಚ್೯ ಪಾಲನೆಯ ಉಪಾಧ್ಯಕ್ಷ ನೇವಿಲ್ ಡಿ’ಸಿಲ್ವ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯ ಪಾತ್ರ ವಿಶೇಷ ಮತ್ತು ಸೇವಾ ಮನೋಭಾವದಿಂದ ಕೂಡಿದೆ. ಎಲ್ಲಾ ಮಹಿಳೆಯರ ಮುಂದಿನ ಜೀವನ ಸುಖಮಯವಾಗಲೆಂದು ಹಾರೈಸಿದರು.
ಸಂಪದ ಸಂಸ್ಥೆಯ ಕೊಡಿ೯ನೇಟರ್ ಸ್ಟಾನ್ಲಿ ಫೆನಾ೯ಂಡಿಸ್ ಮಾತನಾಡಿ, ಸ್ತ್ರೀ ಸಂಘಟನೆಯ ಧ್ಯೇಯ ವಾಕ್ಯ, ತ್ಯಾಗ, ಸೇವೆ. ಪ್ರೀತಿ, ದಯವಾಗಿದೆ. ಲಿಂಗ ತಾರತಮ್ಯೆ ಹೊಗಲಾಡಿಸಿ ಪ್ರತಿಯೊಂದು ಕ್ಷೇತ್ರದಲ್ಲಿ ಸಮಾನವಾಗಿ ಕಾಣಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡಿದ ಜೆಸಿಂತಾ ಡಿ’ಮೆಲ್ಲೊ ಮತ್ತು ವೆರೋನಿಕಾ ಡಿ’ಸಿಲ್ವ ರವರನ್ನು ಶಾಲು ಹಾಕಿ ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವಿವಿಧ ಪಂದ್ಯಾಟದಲ್ಲಿ ವಿಜೇತರಿಗೆ ಮತ್ತು ಕಾಯ೯ಕ್ರಮದಲ್ಲಿ ಸಹಕರಿಸಿದವರಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.
ಸಹಾಯಕ ಗುರುಗಳಾದ ಪಾ|ಜಿತೇಶ್ ಡಿ’ಸೋಜ, ಸಂಯೋಜಕಿ ಸಿ.ರಿಚ್ಚಾರ್ಡ್, ಸಚೇತಕಿ ಐರೀನ್ ನೊರೊನ್ಹಾ, ಸ್ರೀ ಸಂಘಟನೆ ಕೇಂದ್ರೀಯ ಅಧ್ಯಕ್ಷೆ ಗ್ರೇಸಿಯಾ ಕುವೇಲ್ಲೊ, ವಲಯ ಲವೀನಲವೀನ ಪಿರೇರಾ, ನಿತ್ಯ ಜೀವ ಸಂಘದ ಗ್ರೇಸಿಯಾ ಡಿ’ಸೋಜ, ಕಾಯ೯ದಶಿ೯ ಕ್ಲೊಟಿಲ್ಡಾ ಡಿ’ಸೋಜ ಉಪಸ್ಥಿತರಿದ್ದರು.
ನಿಸರ್ಗ ಪಂಗಡದ ಸದಸ್ಯರು ಪ್ರಾಥ೯ನ ಗೀತೆ ಹಾಡಿದರು, ಜೆಸಿಂತಾ ಆಳ್ವ ಸಭಾ ಕಾರ್ಯಕ್ರಮ ಮತ್ತು ಆಲ್ವೀರಾ ಡಿ’ಸೋಜ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಣೆಗೈದರು.
9 ಪಂಗಡದ ಸದಸ್ಯರಿಂದ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾಯ೯ಕ್ರಮ ನಡೆಸಲಾಯಿತು






































