ಸಮಾಜದಲ್ಲಿ ಮಾನವತಾವಾದ ಉಳಿಸುವ ಸತ್ಕಾರ್ಯ ಅಗತ್ಯ
ಕಾರ್ಕಳ: ಮಾನವ ಹಕ್ಕುಗಳು ಹಾಗೂ ಧಾರ್ಮಿಕ ಸಾಮರಸ್ಯ ಘಟಕ ಮತ್ತು ಐಕ್ಯೂಎಸಿಯ ಸಹಯೋಗದಲ್ಲಿ ಮಾನವ ಹಕ್ಕುಗಳ ಘಟಕದ ಉದ್ಘಾಟನೆಯು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಗ್ರೀಟಾ ಮರಿಯ ಕೋತ್ವಾಲ್ ಅವರು, ಮಾನವ ಹಕ್ಕುಗಳು ಮತ್ತು ಅದರ ಮಹತ್ವದ ಕುರಿತಾಗಿ ಮಾತನಾಡುತ್ತಾ ನಮಗೆ ಸಿಗಬೇಕಾದ ಹಕ್ಕನ್ನು ಪಡೆಯುವ ನಿಟ್ಟಿನಲ್ಲಿ ಮಾನವ ಹಕ್ಕುಗಳು ರೂಪುಗೊಂಡಿವೆ. ಅದರ ಸದುಪಯೋಗವನ್ನು ಮಾಡಬೇಕಾದ ಅಗತ್ಯ ಈ ದಿನಗಳಲ್ಲಿದೆ. ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವಿರುವಂತೆ ಬೇರೆಯವರ ಭಾವನೆಗಳಿಗೆ ನೋವಾಗದಂತೆ ಬದುಕುವುದು ಕೂಡಾ ಬಹಳ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ ಕೋಟ್ಯಾನ್ ಮಾತನಾಡುತ್ತಾ, ಎಲ್ಲ ಧರ್ಮಗಳ ದಾರ್ಶನಿಕರು ಮಹತ್ವ ಕೊಟ್ಟದ್ದು ವಿದ್ಯೆ ಮತ್ತು ಅರಿವಿಗೆ, ಸಮಾಜದಲ್ಲಿ ಮಾನವತಾವಾದವನ್ನು ಉಳಿಸುವ ಕೆಲಸ ಆಗಬೇಕು.
ಶಾಂತಿಯ ಮಹತ್ವವನ್ನು ಎಲ್ಲರೂ ಅರಿಯಬೇಕು. ಇದಕ್ಕಾಗಿ ಸಮಾಜದ ಯಾವುದನ್ನೂ ಹಾಳು ಮಾಡಬಾರದು. ಬದಲಾವಣೆ ಯಾವಾಗಲೂ ಅಮೂಲಾಗ್ರವಾಗಿ ಆಗಬೇಕಾದ ಹಾಗೆ ಸುಧಾರಣೆಯ ವ್ಯವಸ್ಥೆಯೂ ಕುಸಿಯದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು. ವಿದ್ಯಾರ್ಥಿಗಳು ಹಕ್ಕುಗಳನ್ನು ಅರಿತು ನಡೆಯಬೇಕು. ಹಿಂಜರಿಕೆಯಿದ್ದಾಗ ಸೋಲನ್ನು ಎದುರಿಸಬೇಕಾಗುತ್ತದೆ. ಹಾಗಾಗದಂತೆ ತಡೆಗಟ್ಟುವ ಎಚ್ಚರಿಕೆ ನಿಮ್ಮಲ್ಲಿರಬೇಕು ಎಂದರು.


























