ಸಮಾಜಕ್ಕೆ ಮಾರಕವಾದ ಅಸಮಾನತೆಯ ಪಿಡುಗು
ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ ಹಾಗೂ ಪ್ರಕೃತಿ ಸಮೂಹ ಸಂಸ್ಥೆಗಳು ಕಾಂತಾವರ ಗ್ರಾಮ, ಸಾಣೂರು ಅಂಚೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯ ಅಂಗವಾಗಿ, ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವು ಫೆರಂದು ಕಾಂತಾವರ ಪ್ರಕೃತಿ ನ್ಯಾಷನಲ್ ಸ್ಕೂಲ್ ನಲ್ಲಿ ಫೆ.20ರಂದು ಜರಗಿತು.
ಕಾರ್ಕಳ ನ್ಯಾಯವಾದಿಗಳ ಸಂಘ(ರಿ)ದ ಉಪಾಧ್ಯಕ್ಷ ಕೆ. ಹರೀಶ್ ಅಧಿಕಾರಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007ರ ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನಾಗಿ ಅಂಗೀಕರಿಸಲಾಯಿತು. 2009ರಲ್ಲಿ ಈ ದಿನವನ್ನು ಆಚರಿಸಲು ಅನುಮೋದನೆ ನೀಡಲಾಯಿತು. ಪ್ರತಿ ಸಮಾಜದಲ್ಲೂ ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅದನ್ನು ಸಂಪೂರ್ಣವಾಗಿ ಕಿತ್ತು ಹಾಕಿದಾಗ ದೇಶದ ಮತ್ತು ವಿಶ್ವದ ಅಭಿವೃದ್ಧಿಯಾಗಲು ಸಾಧ್ಯವೆಂದು ಹರೀಶ್ ಅಧಿಕಾರಿ ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ನ್ಯಾಯವಾದಿ ಲೋಲಾಕ್ಷ ಮಾತನಾಡಿ, ಸಾಮಾಜಿಕ ಅಸಮಾನತೆಯ ಹಾಗೂ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯ ಔಚಿತ್ಯವನ್ನು ವಿವರಿಸಿದರು.
ಪ್ರಕೃತಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕ್ರಿಸ್ಟಿನ್ ಜೆರಾಲ್ಡ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು.

ಆಡಳಿತ ಅಧಿಕಾರಿ ಮಧುಸೂದನ್ ಶಿಂಧೆ ಇವರು ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯ ಬಗ್ಗೆ ಮಾತನಾಡಿದರು.
ಕಾರ್ಯದರ್ಶಿ ಚಾರ್ಲ್ಸ್ ಕ್ರಾಸ್ತಾ, ಸೂಪರ್ ವೈಸರ್ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜು ಪ್ರಾಂಶುಪಾಲೆ ಜಯ ಶೆಣೈ ಸ್ವಾಗತಿಸಿದರು. ಶಿಕ್ಷಕಿಯರಾದ ಸೌಮ್ಯ ವೈ ಎಸ್. ನಿರೂಪಿಸಿದರು. ಸೌರಭ ಜಿ. ಶೆಟ್ಟಿ ವಂದನಾರ್ಪಣೆಗೈದರು.













