ಸದೃಢ ಶರೀರಕ್ಕೆ ಯೋಗಾಭ್ಯಾಸ

Picture of RB NEWS

RB NEWS

Bureau Report

ಸದೃಢ ಶರೀರಕ್ಕೆ ಯೋಗಾಭ್ಯಾಸ” ನಿರಂತರ ರೂಢಿಯಲಿ/
ರೋಗ ನಿರೋಧಕ ಆರೋಗ್ಯ ಶಕ್ತಿ ಚಾಲನೆಯಲಿ/
ಪ್ರತಿ ದಿನವೂ ಜೀವನದ ಬದುಕ ಉಲ್ಲಾಸದಿಂದಿರಲಿ/
ಬೆಳಿಗ್ಗೆ ಎದ್ದು ನಮ್ಮ ಮನಸ್ಸು ನಿಯಂತ್ರಣದಲಿ//{೦೧}//

ಮಾಡುವ ನಿಲುವು ಮತ್ತು ಮನವೂ ಚನ್ನಾಗಿರಲಿ/
ಉತ್ತಮ ಆಲೋಚನೆಗೆ ಕೈ ನೀವು ಜೋಡಿಸಲಿ/
ಮಾಡಬೇಕು ಎಂಬ ಭಾವನೆ ತೊಡಬೇಕು ಈ ಜಗ/
ಆಲಸ್ಯ ಮಾಡಿದಿರಿ ಇಲ್ಲವಾದರೆ ಅಷ್ಟೇ ಲಾಗ//೦೨//

ನಾವು ದಿನ ನಿತ್ಯ ಮಾಡಿದರೆ “ಯೋಗ”/
ರೂಡಿಸಿಕೊಳ್ಳಿ ಖಂಡಿತ ಎಲ್ಲರಿಗೂ ಸಿಗುವುದು ಭೋಗ/
ಶರೀರದ ಕಶ್ಮಲ ದೂರ ತೊಲಗುವುದು ರೋಗ/
ಯೋಗ ಮಾಡಲು ಆರಿಸಿ ಉತ್ತಮ ಜಾಗ//{೦೩}//

ನಿತ್ಯವು ಆಗಲಿ ವ್ಯಾಯಾಮ ಮಾಡುವ ಭಾಗ/
ಕೇವಲ ಕೆಲ ಸಮಯವಷ್ಟೇ ಮಾಡಿ ತ್ಯಾಗ/
ನೋಡಿ ಹೇಗೆಲ್ಲಾ ಬದಲಾವಣೆ ಆಗುವುದು ಆಗ/
ಸಂಗೀತದ ಆಲಿಸುವ ಯೋಗ ಜೊತೆ ನಗ//{೦೪}//

ಮುಂಜಾನೆ ಸಮಯದ ಮನದ ಭಾವ ಸಂತಸ/
ತಂಪಾದ ಪ್ರಕೃತಿಯ ಸೂಸುವ ಮಧುರ ವಿಲಾಸ/
ಸೂರ್ಯನ ಕಿರಣಗಳು ಬೆಳಿಗ್ಗೆ ಬೀಳುವ ಆಗಸ/
ಮನಸ್ಸಿಗೆ ಆನಂದಮಯ ಮದ ನೀಡುವ ಉಲ್ಲಾಸ//{೦೫}//

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top