ಸತ್ತ‌ ದನವನ್ನು ಎಸೆದು ಹೋದ ದುಷ್ಕರ್ಮಿಗಳು!

Picture of RB NEWS

RB NEWS

Bureau Report

ಕಾರ್ಕಳ : ದಕ್ಷಿಣ ಕನ್ನಡ -ಉಡುಪಿ ಜಿಲ್ಲೆಯ ಗಡಿಭಾಗವಾದ ಕಾರ್ಕಳ ತಾಲೂಕಿನ ಕಾಂತಾವರ-ಬಾರಾಡಿ ಕ್ರಾಸ್ ಎಂಬಲ್ಲಿ ಸತ್ತ ದನವೊಂದನ್ನು‌ ದುಷ್ಕರ್ಮಿಗಳು ಎಸೆದು ಹೋದ ಘಟನೆ ಬೆಳಕಿಗೆ ಬಂದಿದೆ.

ಶುಕ್ರವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಜಮಾಯಿಸಿದರು. ಮಾಹಿತಿ ತಿಳಿದ ಕಾರ್ಕಳ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಅಗಮಿಸಿ ಅಗತ್ಯ ಮಾಹಿತಿ ಕಲೆ‌ ಹಾಕಿದ್ದಾರೆ.

ಎಸೆದು ಹೋದ ಸತ್ತ ದನ ಮೇಲೆ ಕುರುಚಲು ಗಿಡಗಳನ್ನು ಮುಚ್ಚಿಹಾಕಲಾಗಿರುವುದು ಕಂಡು ಬಂದಿದೆ.‌ ದನದ ಹೊಟ್ಟೆ ಬಾತು ಹೋಗಿದೆ. ಘಟನಾ ಪಕ್ಕದಲ್ಲಿ ದಫನ ಕ್ರಿಯೆ ನಡೆಸಲಾಗಿದೆ.

ಕಳೆದ ಒಂದು ತಿಂಗಳ ಹಿಂದೆ ಇದೇ ಪರಿಸರದಲ್ಲಿ ಸತ್ತ ಹಂದಿಯೊಂದನ್ನು ದುಷ್ಕರ್ಮಿಗಳು ಎಸೆದು ಹೋಗಿದ್ದರು. ಆ ಸಂದರ್ಭದಲ್ಲಿ ಗ್ರಾಮಸ್ಥರು ದಫನ ಕ್ರಿಯೆ ನಡೆಸಿದ್ದರು.


ಬೆಳುವಾಯಿಯಿಂದ ಕಾರ್ಕಳಕ್ಕೆ ಹೋಗುವಾಗ ಚಿಲಿಂಬಿಯ ಎಡಭಾಗವಾಗಿ ಕಾಂತಾವರ -ಬಾರಾಡಿ ರಸ್ತೆ ಸಂಪರ್ಕಿಬಹುದಾಗಿದೆ‌.
ವಿರಳ ಜನಸಂಚಾರ ಪ್ರದೇಶವಾಗಿರುವ ಇದೇ ಭಾಗದಲ್ಲಿ ಕ್ರಿಮಿನಲ್ ಗಳಿಗೂ ವರದಾನವಾಗಿದೆ.


ಹೊಸ್ಮಾರು ಪ್ರದೇಶದಲ್ಲಿ ವಾಸವಾಗಿದ್ದ ವಿವಾಹಿತ ಟೀಚರ್ ವೊಬ್ಬರು ತಾನು ಪ್ರೀತಿಸುತ್ತಿದ್ದ ಪ್ರಿಯಕನನ್ನು ತನ್ನ ಮಗ ಹಾಗೂ ಖಾಸಗಿ ಬಸ್ಸು ಚಾಲಕ ಸೇರಿಕೊಂಡು ಕೊಲೆ ನಡೆಸಿದ್ದರು.

ಟೀಚರ್ ನ ಪ್ರಿಯಕರ ಹೊಸ್ಮಾರಿಗೆ ಬಂದಿದ್ದ ಕಾರನ್ನು ಚಲಾಯಿಸಿದ ಆರೋಪಿತರು ಕಾಂತಾವರ ಬಾರಾಡಿ ರಸ್ತೆಯಲ್ಲಿ ಕಂದಕದಲ್ಲಿ ಉರುಳಿಸಿ ಹಾಕಿದ್ದು ಅದರಲ್ಲಿ ಮೃತದೇಹ ಪತ್ತೆಯಾಗಿತ್ತು.

ಕತ್ತಿಗೆ ಹಗ್ಗ ಬಿಗಿದು ಕೊಲೆಗೈದಿರುವುದು ಮೇಲ್ನೋಟಕ್ಕೆ ರುಜುವಾಗಿದ್ದು, ತನಿಖೆ ಪೊಲೀಸರು ಅಂದು ದಿನಗಳ ಅಂತರದಲ್ಲಿ ಆರೋಪಿತರನ್ನು ಬಂಧಿಸಿ ಜೈಲಿಗೆ‌ ಕಳುಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top