ಸತ್ಕಾರ್ಯಕ್ಕೆ ಭಗವಂತನಿಂದ ಸದಾ ಆಶೀರ್ವಾದ : ಶ್ರೀ ಸಂಸ್ಥಾನ ಕೈವಲ್ಯ ಮಠದ ಗೌಡ ಪಾದಾ ಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್ ಶ್ರೀ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ
ಕಾರ್ಕಳ : ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಮಾಜ ಸುಧಾರಣೆ ಮಾಡುವ ಸತ್ಕಾರ್ಯಕ್ಕೆ ಭಗವಂತ ಸದಾ ಆಶೀರ್ವಾದ ನೀಡುತ್ತಾನೆ ಎಂದು ಶ್ರೀ ಸಂಸ್ಥಾನ ಕೈವಲ್ಯ ಮಠದ ಗೌಡ ಪಾದಾ ಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀಮದ್ ಶ್ರೀ ಶ್ರೀ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಕಾರ್ಕಳ ಸಾಲ್ಮರದ ಬಳಿಯ ಇಂದ್ರಪ್ರಸ್ಥ ಕಚೇರಿಯಲ್ಲಿ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಕಾರ್ಕಳ ಟೈಗರ್ಸ್ ಹಮ್ಮಿಕೊಂಡ ಜನ ಸೇವಾ ಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸನಾತನ ಧರ್ಮ ಉಳಿಸುವ ಕಾರ್ಯದಲ್ಲಿ ನಿರಂತರ ಪಾಲ್ಗೊ ಳುವಂತೆ ತಿಳಿಸಿದ ಅವರು ಸಮಾಜಮುಖಿ ಕಾರ್ಯಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತವೆ ಎಂದರು.
ಹರೀಶ್ ಮಧುರಾ ಮಾತನಾಡಿದರು. ಸೂರ್ಯ ಭಟ್ ಮಾತನಾಡಿ ಧಾರ್ಮಿಕ ವಿಚಾರಗಳ ಬಗ್ಗೆ ತಿಳಿಸಿದರು. ಬೋಳ ಪ್ರಶಾಂತ್ ಕಾಮತ್ ಉಪಸ್ಥಿತರಿದ್ದರು.
ಸರಕಾರಿ ಯೋಜನೆ ಸದ್ಬಾಳಕೆಯಾಗಲಿ…
ಜನರಿಗೆ ಸರಕಾರಿ ಯೋಜನೆಗಳ ಮಾಹಿತಿ ಹಾಗೂ ಸೇವೆ ಒದಗಬೇಕೆಂಬ ನಿಟ್ಟಿನಲ್ಲಿ ಜನ ಸೇವಾ ಕಚೇರಿ ಆರಂಭ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯೋಜನೆಗಳ ಬಗ್ಗೆ ಕೆಲವೇ ದಿನಗಳಲ್ಲಿ ಸಂಪೂರ್ಣ ಸೇವೆ ನೀಡುತ್ತೇವೆ. ಈ ಜನೋಪಯೋಗಿ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ಅಗತ್ಯ ಇದೆ ಎಂದು ಬೋಳ ಪ್ರಶಾಂತ್ ಕಾಮತ್ ತಿಳಿಸಿದರು.
ಜನ ಸೇವಾ ಕಚೇರಿ ಮೂಲಕ ಜನ ಸೇವೆಗೆ ಮುನ್ನಡಿಯಿಟ್ಟ ಕಾರ್ಕಳ ಟೈಗರ್ಸ್

ನಿಸ್ವಾರ್ಥ ಸೇವೆಗೆ ಬೋಳ ಪ್ರಶಾಂತ್ ಕಾಮತ್ ಚಿಂತನೆ
ಕಾರ್ಕಳದಲ್ಲಿ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಕಾರ್ಕಳ ಟೈಗರ್ಸ್ ಸಂಘಟನೆಯು ಜನ ಸೇವಾ ಕಚೇರಿ ಆರಂಭಿಸುವ ಮೂಲಕ ಜನರನ್ನು ತಲುಪಲು ಹೊರಟಿದೆ. ಬಹುಶ; ಸಂಘಟನೆಯೊಂದು ಜನ ಸೇವಾ ಕಚೇರಿಯನ್ನು ಆರಂಭ ಮಾಡುವುದು ಕಾರ್ಕಳ ಕ್ಷೇತ್ರದಲ್ಲಿ ಅಪರೂಪ ಮತ್ತು ಅತಿಶಯ ವಿಚಾರ. ಯಾವುದೇ ರಾಜಕೀಯ ಪಕ್ಷ ಇರಲಿ ಅವುಗಳು ಚುನಾವಣೆಯ ದೃಷ್ಟಿಯನ್ನು ಗಮನದಲ್ಲಿಟ್ಟು ಜನ ಸೇವೆ ಮಾಡುತ್ತಾರೆ.
ಆದರೆ ಈ ಸಂಘಟನೆ ಮಾತ್ರ ಬಹಳ ವಿಶಿಷ್ಠತೆಯನ್ನು ಪಡೆದಿದೆ. ೨೦೨೩ನೇ ಸಾಲಿನ ಡಿಸೆಂಬರ್ ೧೦ರಂದು ಮಕ್ಕಳಿಗೆ ಹುಲಿ ಕುಣಿತ ಕಲಿಸಲಿಕ್ಕಾಗಿ ಆರಂಭಗೊಂಡ ಕಾರ್ಕಳ ಟೈಗರ್ಸ್ ಜೊತೆಗೆ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಒಗ್ಗೂಡಿತು. ಈ ಒಗ್ಗೂಡುವಿಕೆಯಲ್ಲಿ ತುಳುನಾಡಿನ ಸಂಸ್ಕೃತಿ ಉಳಿಸುವ ಹಾಗೂ ದೇಶಾಭಿ ಮಾನ ಸಾರುವ ಕಾರ್ಯಕ್ರಮ ಗಳನ್ನು ಮಾಡುವುದೇ ಇವರ ಉದ್ದೇಶವಾಗಿತ್ತು. ಈ ಸಂಘಟನೆಯ ಮೂಲಕ ಹಲವಾರು ಕಾರ್ಯಕ್ರಮಗಳು ಮೂಡಿ ಬಂದವು ಇದರ ಮೂಲಕ ಮೂಡಿ ಬಂದ ಪಿಲಿ ರಂಗ್ ದೈಸಿರ ಹಾಗೂ ಕಾರ್ಲೋತ್ಸವ ದಂತಹ ಅಪೂರ್ವವಾದ ಕಾರ್ಯಕ್ರಮ ಗಳು ರಾಜ್ಯ ಮಟ್ಟದಲ್ಲೇ ಗಮನ ಸೆಳೆದವು.
ಸೇವಾ ಪರಮೋ ಧರ್ಮ
ಸಂಘಟನೆಯಿಂದಲೇ ಸಮಾಜ ಕಟ್ಟುವ ಜೊತೆಗೆ ಬಡ ವರ್ಗದ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಈ ಸಂಘಟನೆ ಈಗಾಗಲೇ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡಿದೆ. ಕಾರ್ಕಳದ ಸಾಲ್ಮರದಲ್ಲಿರುವ ಇಂದ್ರ ಪ್ರಸ್ಥ ಕಚೇರಿಯಲ್ಲಿ ಎಲ್ಲಾ ಕಾರ್ಯಕ್ರಮಗಳ ರೂಪು ರೇಷೆ ಹಾಕಿಕೊಂಡು ಸಮಾಜದಲ್ಲಿ ಜನರಿಗೆ ಸೇವೆ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ.
ಈ ಸಂಘಟನೆಯಲ್ಲಿರುವ ಯುವಕರು ಹಾಗೂ ಮಹಿಳೆಯರು ಯಾವುದೇ ಫಲಾಪೇಕ್ಷೆ ಇಲ್ಲದೆ ಹಾಗೂ ಯಾವುದೇ ಪ್ರಚಾರಕ್ಕೆ ತಮ್ಮನ್ನು ತೋರಿಸಿ ಕೊಳ್ಳದೆ ಅಹರ್ನಿಶಿ ಶ್ರಮಿಸುತ್ತಿರುವುದೇ ಈ ಬಳಗದ ಮೂಲಕ ಮೂಡಿ ಬಂದ ಎಲ್ಲಾ ಕಾರ್ಯಕ್ರಮಗಳು ಯಶಸ್ಸಾಗಲು ಕಾರಣವಾಗಿದೆ.
ಸಂಸ್ಕೃತಿ ಉಳಿಸುವ ಕಾರ್ಯಕ್ರಮ ಹಾಗೂ ದೇಶ ಭಕ್ತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುವ ಜೊತೆಗೆ ಸಂಘಟನೆಯ ಮೂಲಕ ಜನ ಸಾಮಾನ್ಯರ ಸೇವೆ ಮಾಡಲು ನಾವೇಕೆ ಶ್ರಮಿಸಬಾರದು ಎಂಬ ಕಲ್ಪನೆ ಬಂದ ಕೂಡಲೇ ಈ ಬಾರಿ ಜನ ಸೇವಾ ಕಚೇರಿಯನ್ನು ಈ ಸಂಘಟನೆ ಆರಂಭ ಮಾಡಿದೆ.
ಜನರ ಸೇವೆಯನ್ನು ಮಾಡಲು ಸಂಘಟನೆಯ ಮೂಲಕವೂ ಸಾಧ್ಯವಿದೆ ಎಂದು ತೋರಿಸಿ ಕೊಡುವ ನಿಟ್ಟಿನಲ್ಲಿ ಬೋಳ ಪ್ರಶಾಂತ್ ಕಾಮತ್ರ ಸಮಾಜ ಮುಖಿ ಚಿಂತನೆಯೇ ಈ ಹೊಸ ವ್ಯವಸ್ಥೆಗೆ ಕಾರಣವಾಗಿದೆ.
ಸಮಾಜವನ್ನು ಬಲಿಷ್ಠವಾಗಿ ಕಟ್ಟಲು ಆರಂಭಗೊಂಡ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಕಾರ್ಕಳ ಟೈಗರ್ಸ್ ಆರಂಭಗೊಂಡ ಒಂದು ವರ್ಷ ದಲ್ಲೇ ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮನೆ ಮಾತಾಗಿದೆ. ಈಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಜನ ಸೇವಾ ಕಚೇರಿ ಆರಂಭ ಮಾಡಿರುವುದು ಜನರಲ್ಲಿ ಸಂತಸ ಮೂಡಿಸಿದೆ.

































