ಸಂಸ್ಥಾಪಕರ ದಿನಾಚರಣೆ : ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ 3ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು

Picture of RB NEWS

RB NEWS

Bureau Report

ಕಾರ್ಕಳ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥಾಪಕರ ದಿನದ ಪ್ರಯುಕ್ತ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.

ಕಾರ್ಕಳ ಗಣಿತನಗರ ಜ್ಞಾನಸುಧಾದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮಗಳು

  1. 26.12.2025ನೇ ಶುಕ್ರವಾರ ಸಂಜೆ 6 ಗಂಟೆಗೆ ‘ಲೀಲಾಮೂರ್ತಿ ಶ್ರೀ ಕೃಷ್ಣ’ ಕಾರ್ಕಳ ಜ್ಞಾನಸುಧಾದ ಯಕ್ಷೇತ್ಕರ್ಷ ತಂಡದ ಸದಸ್ಯರಿಂದ ಯಕ್ಷಗಾನ.
  2. 27.12.2025ನೇ ಶನಿವಾರ ಸಂಜೆ 5.15 ಗಂಟೆಗೆ ‘ಜ್ಞಾನ ತೀರ್ಥ ವಿಠಲ’ ಸಂಗೀತ ಸಂಜೆಯಲ್ಲಿ ಭಾಗವಹಿಸುವ ಕಲಾವಿದರು : ಪಂಡಿತ್ ಜಯತೀರ್ಥ ಮೇವುಂಡಿ, ಅಂಕುಶ್ ನಾಯಕ್, ನರೇಂದ್ರ ಎಲ್ ನಾಯಕ್, ಆಕಾಶ್, ಹೇಮಂತ್ ಜೋಷಿ, ಸೂರ್ಯಕಾಂತ್ ಸುರ್ವೆ, ರಾಜೇಶ್ ಭಾಗವತ್ ಮತ್ತು ಅಶ್ವಥ ಶೆಣೈ.
  3. 28.12.2025 ಆದಿತ್ಯವಾರ ಸಂಜೆ 5 ಗಂಟೆಗೆ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಿ.ಸುನಿಲ್ ಕುಮಾರ್ ಶಾಸಕರು ಕಾರ್ಕಳ ವಿಧಾನಸಭಾ ಕ್ಷೇತ್ರ, ಮುಖ್ಯ ಅಭ್ಯಾಗತರು: ಡಾ. ಶರತ್‌ರಾವ್ ಪ್ರೊ ವೈಸ್ ಚಾನ್ಸಲರ್ ಮಾಹೆ, ಡಾ.ಜಿ.ರಾಮಕೃಷ್ಣ ಆಚಾರ್, ಚೇರ್‌ಮನ್ ಎಸ್.ಕೆ.ಎಫ್ ಮೂಡಬಿದ್ರೆ ಹಾಗೂ ಸಂಕೇತ್ ಜಿ.ಬಿ ಸಾಫ್ಟ್‌ವೇರ್ ಇಂಜಿನಿಯರ್ ಗೂಗಲ್ (ಐ.ಐ.ಟಿ ವಾರಣಾಸಿ ಹಾಗೂ ಜ್ಞಾನಸುಧಾದ ಪೂರ್ವವಿದ್ಯಾರ್ಥಿ) ಇವರು ಭಾಗವಹಿಸಲಿದ್ದಾರೆ.

ಉಡುಪಿ ಹಾಗೂ ಮಣಿಪಾಲ ಜ್ಞಾನಸುಧಾದಲ್ಲಿ ಸಂಸ್ಥಾಪಕರ ದಿನಾಚರಣೆಯು ಜನವರಿ 10, 2026ರಂದು ಮಣಿಪಾಲ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪುರಸ್ಕಾರಕ್ಕೆ ಪಾಲ್ಗೊಳ್ಳಲಿರುವ ಜ್ಞಾನಸುಧಾದ ಸಾಧಕರು

  1. ನೀಟ್ ಮೂಲಕ ಎಂ.ಬಿ.ಬಿ.ಎಸ್ ಪ್ರವೇಶ ಪಡೆದ- 228 ವಿದ್ಯಾರ್ಥಿಗಳು,
  2. ಜೆಇಇ ಅಡ್ವಾನ್ಸ್‌ಡ್ ಮೂಲಕ ಐಐಟಿ ಪ್ರವೇಶ- ಓರ್ವ ಸಾಧಕ.
  3. ಜೆ.ಇ.ಇ ಮೈನ್ ಮೂಲಕ ಎನ್.ಐ.ಟಿ ಪ್ರವೇಶ- 9 ವಿದ್ಯಾರ್ಥಿಗಳು.
  4. ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಪ್ರವೇಶ- ಇಬ್ಬರು ವಿದ್ಯಾರ್ಥಿಗಳು.
  5. ಕೆ.ಸಿ.ಇ.ಟಿ ಇಂಜಿನಿಯರಿಂಗ್‌ನಲ್ಲಿ ಒಂದು ಸಾವಿರದ ಒಳಗಿನ ರ್ಯಾಂಕ್ ಪಡೆದ 41 ವಿದ್ಯಾರ್ಥಿಗಳು.
  6. ಸಿ.ಎ ಫೌಂಡೇಶನ್ – ಒಬ್ಬ ವಿದ್ಯಾರ್ಥಿನಿ
  7. 2025ರಲ್ಲಿ ಸಿ.ಎ ಪರೀಕ್ಷೆ ತೇರ್ಗಡೆಯಾದ ಪೂರ್ವ ವಿದ್ಯಾರ್ಥಿಗಳು 8 ವಿದ್ಯಾರ್ಥಿಗಳು,
  8. ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳಿಸಿದ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಳಗಾದ ಕ್ರೀಡಾ ಸಾಧಕರು ವಿದ್ಯಾರ್ಥಿಗಳು, 15
  9. ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಾಧನೆ – ಓರ್ವ ವಿದ್ಯಾರ್ಥಿ.
  10. ಸಂಸ್ಥೆಯಿಂದ ಎಂಬಿ.ಬಿಎಸ್ ಪ್ರವೇಶ ಪಡೆದ 228 ವಿದ್ಯಾರ್ಥಿಗಳ ಪರವಾಗಿ ತಲಾ ಎರಡು ಸಾವಿರದಂತೆ ಭಾರತೀಯ ಸೇನೆಗೆ ಒಟ್ಟು ರೂ. 4 ಲಕ್ಷದ 56 ಸಾವಿರವನ್ನು ದೇಣಿಗೆಯಾಗಿ ನೀಡಲಾಗುವುದು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top