ಸಂಸ್ಕೃತಿಯಿಂದ ಅಸ್ತಿತ್ವ : ಆನೆಗುಂದಿ ಮಹಾಸ್ವಾಮಿ

Picture of RB NEWS

RB NEWS

Bureau Report

ಕಾಪು :ಸಂಸ್ಕೃತಿ ಕಳೆದುಕೊಂಡಲ್ಲಿ ಅಸ್ತಿತ್ವ ಇಲ್ಲದಂತಾಗುತ್ತದೆ. ಆ ನಿಟ್ಟಿನಲ್ಲಿ ಸಮಾಜದಲ್ಲಿ ಸ್ವಸ್ಥಾನಮಾನದ ಬಗ್ಗೆ ಕಲ್ಪನೆಯ ಜೊತೆಗೆ ಸಮಾಜದ ಸಂಸ್ಕಾರವನ್ನು ಅರಿತಿರಬೇಕು. ಇನ್ನೊಬ್ಬರ ಆಶಯ-ಇಂಗಿತವನ್ನು ತಿಳಿಯತಕ್ಕ ಮನಸ್ಸು ನಮ್ಮದಾಗಿರಬೇಕು. ಸ್ವಾರ್ಥ ಬಿಟ್ಟು ಎಲ್ಲರ ಉದ್ಧಾರಕ್ಕೆ ಪ್ರಯತ್ನಿಸುವ ಮೂಲಕ ಸುಸಂಸ್ಕೃತರಾಗಿರಿ ಎಂದು ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.

ಶ್ರೀಗಳವರು ಇಂದು ಪಡುಕುತ್ಯಾರು ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ತಮ್ಮ 21 ನೇ ವರ್ಷದ ಚಾತುರ್ಮಾಸ್ಯದ ಪರ್ವಕಾಲದಲ್ಲಿ ಜಗದ್ಗುರುಗಳ ಜನ್ಮವರ್ಧಂತಿ ಪ್ರಯುಕ್ತ ನಡೆದ ವಿದ್ಯಾರ್ಥಿ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಯುವ ಜನಾಂಗವು ದುರ್ವಸ್ಯನಕ್ಕೆ ಬಲಿಯಾಗದೆ ಅತ್ಯುನ್ನತ ಸಾಧನೆಯ ಮೂಲಕ ಸಮಾಜದಲ್ಲಿ ಮತ್ತಷ್ಟು ಸಾಧಕರಾಗಿ ಮೂಡಿ ಬರುವಲ್ಲಿ ಭಗವಂತನು ಅನುಗ್ರಹಿಸಲಿ ಎಂದು ನುಡಿದರು.

ವಿಶೇಷ ಆಹ್ವಾನಿತರಾಗಿದ್ದ ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಹರೀಶ್ ಆಚಾರ್ಯ ಜಲಕದಕಟ್ಟೆ ಮಾತನಾಡಿ, ಯುವ ಸಮುದಾಯವು ಉತ್ತಮ ಸಂಸ್ಕಾರ-ಸಂಸ್ಕೃತಿ, ನಮ್ಮ ಸಮಾಜ ಎಂಬ ಸಾಮುದಾಯಿಕ ಭಾವನೆ, ಉನ್ನತ ಜ್ನಾನದ ಮೂಲಕ ಸಂಪತ್ತು ಗಳಿಸಿ ಸಮಾಜದ ಆರೋಗ್ಯದ ಭಾಗವಾಗಿ ಸಮಾಜಕ್ಕೆ ಶಕ್ತಿ ನೀಡಿ ಸಮಾಜದ ಆಸ್ತಿಯಾಗಿರಿ ಎಂದರು.

ಎಸ್. ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರೀಯಲ್ ಕೊ.ಆಪ್ ಸೊಸೈಟಿ ಮಂಗಳೂರು ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಪೆರ್ಡೂರು, ಕಾಸರಗೋಡು ಸರಕಾರಿ ಕಾಲೇಜು ಸಹ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೊಸಂಗಡಿ, ಮೂಡಬಿದ್ರಿ ಎಸ್.ಎನ್.ಎಮ್. ಪಾಲಿಟೆಕ್ನಿಕ್ ಉಪನ್ಯಾಸಕ, ಮಂಗಳೂರು ವಿಶ್ವಕರ್ಮ ಕಲಾ ಪರಿಷತ್ ಕೀರ್ತನಕಾರ ಹಾಗೂ ಅಧ್ಯಕ್ಷ ಡಾ. ಎಸ್.ಪಿ .ಗುರುದಾಸ್ ಮಂಗಳೂರು ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ, ಕಟಪಾಡಿ ಪಡುಕುತ್ಯಾರು ಇದರ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ವಹಿಸಿದ್ದರು.

ವಿದ್ಯಾರ್ಥಿ ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 95 ಕ್ಕಿಂತ ಅಂಕ ಅಂಕ ಗಳಿಸಿದವರು, ಪದವಿ, ಸ್ನಾತಕೋತ್ತರ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿ ಗಳಿಸಿದವರು, ಪಿ.ಎಚ್.ಡಿ ಪದವೀಧರರನ್ನು ಅಭಿನಂದನಾ ಪತ್ರ, ರಜತ ಪದಕ, ಸ್ಮರಣಿಕೆ ಗುರು ಫಲಮಂತ್ರಾಕ್ಷತೆಯೊಂದಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಪ್ರತಿಷ್ಠಾನದ ಉಪಾಧ್ಯಕ್ಷ, ಉಪ್ರಳ್ಳಿ ಶ್ರೀಕರಸ್ಥಳ ನಾಗಲಿಂಗಸ್ವಾಮೀ ಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ ಕಳಿ, ಪಡುಪಣಂಬೂರು ನಾಲ್ಕೂರು ಪಂಜುರ್ಲಿ ದೈವಸ್ಥಾನ ಅಧ್ಯಕ್ಷ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.


ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿದರು. ಕೋಶಾಧಿಕಾರಿ ಅರವಿಂದ ವೈ.ಆಚಾರ್ಯ ಬೆಳುವಾಯಿ ವಂದಿಸಿದರು. ನ್ಯಾಯವಾದಿ ಕೆ.ಎಂ ಗಂಗಾಧರ ಕೊಂಡೆವೂರು, ಗೀತಾ ಚಂದ್ರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top