ಸಂಸದ ಅಜಯ್ ನಿಶಾದ್ ಬಿಜೆಪಿಗೆ ಗುಡ್ ಬೈ

Picture of RB NEWS

RB NEWS

Bureau Report

ನವದೆಹಲಿ: ಲೋಕಸಭಾ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವಾಗಲೇ ರಾಷ್ಟ್ರ ರಾಜಕರಣಗಳಲ್ಲಿ ಬದಲಾವಣೆಗಳಾಗುತ್ತಿವೆ.

ಬಿಹಾರದ ಮುಜಾಫ‌ರ್ ಪುರ ಕ್ಷೇತ್ರದ ಹಾಲಿ ಸಂಸದ ಅಜಯ್ ನಿಶಾದ್ ಮಂಗಳವಾರ ಬಿಜೆಪಿ ತೊರೆದು ಕಾಂಗ್ರೆಸಿಗೆ ಸೇರ್ಪಡೆಯಾಗಿದ್ದಾರೆ.

ಎಐಸಿಸಿ ಕಚೇರಿಯಲ್ಲಿಂದು ನಡೆದ ಸರಳ ಸಮಾರಂಭದಲ್ಲಿ ಪವನ್ ಖೇರಾ ಮತ್ತಿತರ ನಾಯಕರ ಸಮ್ಮುಖದಲ್ಲಿ ಅಜಯ್ ನಿಶಾದ್ ಕಾಂಗ್ರೆಸ್‌ ಸೇರ್ಪಡೆಯಾದರು.

ಮುಜಾಫ‌ರ್ ಪುರದಿಂದ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಣೆಯಿಂದ ನಿಶಾದ್ ಅಸಮಾಧಾನಗೊಂಡಿದ್ದರು.

2014 ರಿಂದ ಸತತ ಎರಡು ಅವಧಿಗೆ ಗೆದ್ದಿರುವ ಸ್ಥಾನದಿಂದ ಕಾಂಗ್ರೆಸ್‌ ಅವರಿಗೆ ಟಿಕೆಟ್ ನೀಡಬಹುದು ಎನ್ನಲಾಗಿದೆ.

ಇದಕ್ಕೂ ಮುನ್ನಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ ನಿಶಾದ್‌, ಜೆ. ಪಿ. ನಡ್ಡಾ ಅವರೇ ಬಿಜೆಪಿಯ ದ್ರೋಹದಿಂದ ಆಘಾತಗೊಂಡು, ಪಕ್ಷದ ಎಲ್ಲಾ ಸ್ಥಾನಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top