ಸಂಶಯಾಸ್ಪದ ಸಾವು ತನಿಖೆಗೆ ದಸಂಸ ಆಗ್ರಹ

Picture of RB NEWS

RB NEWS

Bureau Report


ಉಡುಪಿ: ಮಲ್ಪೆ ಪೋಲೀಸ್ ಠಾಣೆ ವ್ಯಾಪ್ತಿಯ ಲಕ್ಷೀ ನಗರದ ಪಾಳೆಕಟ್ಟೆ ನಿವಾಸಿ ಪ್ರಸಾದ್ (೪೦) ಸಾವು ಹಲವು ಸಂಶಯಕ್ಕೆ ಎಡೆಮಾಡಿದ್ದು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.


ಶುಕ್ರವಾರ ರಾತ್ರಿ ಮನೆ ಸಮೀಪವೇ ನಡೆದ ಘಟನೆಯನ್ನು ಮರುದಿನ ಮದ್ಯಾಹ್ನದ ಹೋತ್ತಿಗೆ ಮೃತದೇಹ ನೀರಿನ ಟ್ರಮ್‌ನ ಒಳಗಿನಿಂದ ದೇಹದ ಕಾಲು ಇದ್ದು, ಮೇಲ್ಬಾಗದಲ್ಲಿ ಅರ್ಧ ತಲೆಕೆಳಗೆ ಹಾಕಿದ ರೀತಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಹಲವು ಭಾಗಗಳಲ್ಲಿ ಗಾಯಗಳಿದ್ದು ಸಂಶಯಕ್ಕೆ ಎಡೆಮಾಡಿದೆ.
ಆತ್ಮಹತ್ಯೆ ಎಂದು ಬಿಂಬಿಸಿರುವ ಈ ಘಟನೆ ಹಲವು ಅನುಮಾನಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿರುವುದರಿಂದ ಊರಿನ ಸುತ್ತುಮುತ್ತ ಭಯದ ವಾತಾವರಣ ನಿರ್ಮಾಣವಾಗಿದೆ. ಮೃತನ ಮನೆಯವರನ್ನು ಸೂಕ್ತ ತನಿಖೆ ನಡೆಸಿ ನ್ಯಾಯ ನೀಡುವಂತೆ ಜಿಲ್ಲಾ ಪೋಲೀಸ್ ಅಧೀಕ್ಷಕರಿಗೆ ದಲಿತ ಮುಖಂಡರಾದ ವಾಸುದೇವ ಮುದ್ದೂರು, ಗಣೇಶ್ ನೆರ್ಗಿ, ಹರೀಶ್ ಸಲ್ಯಾನ್, ರವಿ ಲಕ್ಷಿö್ಮÃನಗರ ಮೊದಲಾದವರು ಆಗ್ರಹಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top