[t4b-ticker]

ಸಂವಿಧಾನ ಜಾಗೃತಿ ಬೈಕ್ ಜಾಥ

Picture of RB NEWS

RB NEWS

Bureau Report

ಕಾರ್ಕಳ :   ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಹಾಗೂ ಕರ್ನಾಟಕ ಸಂಘ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಿಂದ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಬಗ್ಗೆ ಯುವಕ ಮಂಡಲದ ಕಚೇರಿಯಿಂದ ಸಾಣೂರು ಸೇತುವೆ, ಹಾಗೂ ಮರತಂಗಡಿವರೆಗೆ ಸಂವಿಧಾನ ಜಾಗೃತಿ ಬೈಕ್ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. 

ಭಾರತ ಸರಕಾರ ಯುವ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಉಡುಪಿ ಜಿಲ್ಲಾಡಳಿತ ಉಡುಪಿ ಇವರ ಮಾರ್ಗದರ್ಶನದಂತೆ

 ಯುವಕ ಮಂಡಲ( ರಿ.) ಸಾಣೂರು ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಬೈಕ್ ಜಾಥಕ್ಕೆ ಚಾಲನೆ ನೀಡಿದರು. 

 ಜಾಥದಲ್ಲಿ ಉಪಾಧ್ಯಕ್ಷ ಹರೀಶ್ ರಾವ್ ಕಾರ್ಯದರ್ಶಿ ಪ್ರಕಾಶ್ ರಾವ್, ಜೊತೆ ಕಾರ್ಯದರ್ಶಿ ಪ್ರಮಿತ್ ಸುವರ್ಣ,  ಪ್ರಶಾಂತ ಆಚಾರ್ಯ,  ಸಾಂಸ್ಕೃತಿಕ ಕಾರ್ಯದರ್ಶಿ ರಾಜೇಶ್ ಪೂಜಾರಿ, ಸಾಮಾಜಿಕ ಜಾಲತಾಣ ಕಾರ್ಯದರ್ಶಿ ವಿಘ್ನೇಶ್ ರಾವ್, ಮಾಜಿ ಅಧ್ಯಕ್ಷರುಗಳಾದ ಶಂಕರ್ ಶೆಟ್ಟಿ, ಜಗದೀಶ್ ಕುಮಾರ್, ಪ್ರಕಾಶ್ ಮಡಿವಾಳ, ಸದಸ್ಯರುಗಳಾದ ಮೋಹನ್ ಶೆಟ್ಟಿ,  ಸುದರ್ಶನ್ ನಾಯ್ಕ ವಾಗೀಶ್  ಆಚಾರ್ಯ,  ಪವಾನ್ ರಾವ್, ಚಂದ್ರಶೇಖರ್ ಪೂಜಾರಿ, ರಮೇಶ್ ಪೂಜಾರಿ, ಜಯಂತ್ ಎಸ್, ಪ್ರಭಾಕರ ಶೆಟ್ಟಿ, ರೋಹಿತ್ ಆರ್ ಕೆ, ಶರತ್ ರಾವ್, ಸೋಮಶೇಖರ ರಾವ್ ಸದಾಶಿವ ದೇವಾಡಿಗ, ಭಾಗವಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top