ಸಂಘಟನಾತ್ಮಕವಾಗಿ ಬಲಿಷ್ಠವಾದಾಗ, ಸಹಕಾರ ಕ್ಷೇತ್ರ ಪ್ರಗತಿ : ಸಾಣೂರು ನರಸಿಂಹ ಕಾಮತ್

Picture of RB NEWS

RB NEWS

Bureau Report

ಕಲಬುರ್ಗಿ : ಸಹಕಾರ ಭಾರತಿ ಸಂಘಟನಾತ್ಮಕವಾಗಿ ಬಲಯುತವಾದಾಗ ಮಾತ್ರ, ಸಹಕಾರ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚನೆಯಾಗಿ 5 ವರ್ಷಗಳು ಕಳೆದಿದ್ದು, ಹೊಸ ಸಹಕಾರಿ ನೀತಿ ಮತ್ತು ಸಹಕಾರ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಾಗಿ ಕೇಂದ್ರ ಸರಕಾರ ಹಲವಾರು ಕಾರ್ಯ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಸಹಕಾರ ಭಾರತಿ ಸಂಘಟನಾತ್ಮಕವಾಗಿ ಬಲಯತವಾದಾಗ ಮಾತ್ರ ಸಹಕಾರ ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ತಿಳಿಸಿದರು.

ಅವರು ಜೂನ್ 23ರಂದು ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರ ಪ್ರಾಂತೀಯ ಕಚೇರಿ ಸಭಾಭವನದಲ್ಲಿ ಜರುಗಿದ ಕಲಬುರಗಿ ಸಹಕಾರ ಭಾರತಿ ಜಿಲ್ಲಾ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಸಹಕಾರ ಭಾರತಿಯ ನೂತನ ಪೂರ್ಣ ಪ್ರಮಾಣದ ಜಿಲ್ಲಾಸಮಿತಿ ರಚನೆಯಾಗಿ, ಫ್ಯಾಕ್ಸ್ ಮಿಲ್ಕ್, ಗೃಹ ನಿರ್ಮಾಣ ಮತ್ತು ಗ್ರಾಹಕ ಪ್ರಕೋಷ್ಟಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತ್ಯೇಕವಾದ ಜಿಲ್ಲಾ ಮಹಿಳಾ ಸಮಿತಿಯು ರಚನೆಗೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಬುರಗಿ ನಗರದ ಜಗತ್ ಸರ್ಕಲ್ ನಲ್ಲಿರುವ ಆಮಂತ್ರಣ ಹೋಟೆಲ್ ಹಿಂಭಾಗದ ಜಿಲ್ಲಾ ಸಹಕಾರ ಭಾರತಿಯ ನೂತನ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ, ಭಾರತ ಮಾತಾ ಪೂಜನ ಮತ್ತು ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ,ನೂತನ ಜಿಲ್ಲಾ ಕಛೇರಿ ಕಾರ್ಯ ಆರಂಭದ ಬಳಿಕ ಸಹಕಾರ ಭಾರತಿ ಚಟುವಟಿಕೆಗಳಿಗೆ ಇನ್ನಷ್ಟು ವೇಗ ಸಿಗಲಿ ಎಂದು ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕಲಬುರ್ಗಿ ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ ಕೆ.ಬಿ ಸೆಟಿಗಾರವಹಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಪ್ರಚಾರ ಪ್ರಮುಖರಾದ ಕೃಷ್ಣ ಜೋಶಿ, ಪ್ರಸ್ತುತ ಸಹಕಾರ ಕ್ಷೇತ್ರದ ಬಗ್ಗೆ ಜನಸಾಮಾನ್ಯರಿಗೆ ಇರುವ ಅಪನಂಬಿಕೆಯನ್ನು ತೊಡೆದುಹಾಕಿ, ಪಾರದರ್ಶಕ ಮತ್ತು ಉತ್ತಮ ಪ್ರಾಮಾಣಿಕ ಆಡಳಿತದ ಮೂಲಕ ಸಹಕಾರ ಭಾರತಿ ಕಾರ್ಯಕರ್ತರು ಸಂಘಟನೆ ಮತ್ತು ತಾವು ಪ್ರತಿನಿಧಿಸುತ್ತಿರುವ ಸಂಸ್ಥೆಯ ಗೌರವ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶಿವಮೊಗ್ಗ ಸಾಗರದ ಬಿ.ವಿ.ರವೀಂದ್ರನಾಥ್ ಮತ್ತು ಕಲಬುರ್ಗಿ ವಿಭಾಗ ಸಂಘಟನಾ ಕಾರ್ಯದರ್ಶಿ ರಾಜಕುಮಾರ ಮಾನ್ವಿ, ರಾಜ್ಯ ಕಾನೂನು ಪ್ರಕೋಷ್ಟದ ಪ್ರಮುಖ ಸಂಜೀವ ಮಹಾಜನ್, ಜಿಲ್ಲಾ ಮಹಿಳಾ ಪ್ರಮುಖ ವಿಜಯಲಕ್ಷ್ಮಿ ಪಾಟೀಲ್ ಉಪಸ್ಥಿತರಿದ್ದರು.

ಸಹಕಾರ ಭಾರತಿಯ ರಾಜ್ಯ ಗ್ರಾಹಕ ಪ್ರಕೋಷ್ಟದದ ಸಹ ಸಂಚಾಲಕ ಎಸ್ ಎಸ್ ಪಾಟೀಲ್ ರವರು ಪ್ರಸ್ತಾವಿಕವಾಗಿ ಮಾತನಾಡಿದರು.

ಸಹಕಾರ ಭಾರತಿ ರಾಷ್ಟ್ರೀಯ ಮಹಿಳಾ ಸಹಕಾರಿ ಪ್ರಕೋಸ್ಟದ ಪ್ರಮುಖ ಶೈಲಜಾ ತಪಲಿ ಸ್ವಾಗತಿಸಿ, ಜಿಲ್ಲಾ ಪದಾಧಿಕಾರಿ ಶಿವಶರಣಪ್ಪ ವಂದನಾರ್ಪಣೆಗೈದರು.

ಮಲ್ಲಮ್ಮ ನಿರೂಪಿಸಿ, ವಂದನಾರ್ಪಣೆಗಯ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top