ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಗುರು ಪಾದುಕಾ ದಿಗ್ವಿಜಯ ರಥ ಯಾತ್ರೆಯ ಆರಾಧನೆ

Picture of RB NEWS

RB NEWS

Bureau Report


ಕಾರ್ಕಳ:ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಆರಾಧನಾ ಮಹೋತ್ಸವದ ಪ್ರಯುಕ್ತ ಗುರು ಪಾದುಕಾ ದಿಗ್ವಿಜಯ ರಥ
ಯಾತ್ರೆಯು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಪಾರಂಪರಿಕ ಕಟ್ಟಡವಾದ ಯಕ್ಷಗಾನ ಕಲಾ ಮಂದಿರದಲ್ಲಿ ಪೂಜಾ
ಕೈಂಕರ್ಯದೊಂದಿಗೆ ಆರಾಧನೆಗೊಂಡಿತು. ಶ್ರೀಮದ್ ಸುಧೀಂದ್ರ ಸ್ವಾಮೀಜಿಯವರು ಭುವನೇಂದ್ರ ಕಾಲೇಜಿನ ಆರಂಭದ ದಿನಗಳಲ್ಲಿ
ಶಿಲಾನ್ಯಾಸ ಮಾಡಿದ ಸರ್ವೋತ್ತಮರು. ಅಲ್ಲದೆ, ಕಾಲೇಜಿನ ಸುವರ್ಣೋತ್ಸವದ ಸಂದರ್ಭದಲ್ಲಿಯೂ ಆಶೀರ್ವಚಿಸಿದವರು. ಅವರ
ಆಶೀರ್ವಾದದೊಂದಿಗೆ ಆರಂಭವಾದ ಕಾಲೇಜು ಅರುವತ್ತೆರಡು ವರುಷಗಳನ್ನು ಪೂರೈಸಿದೆ. ಆಡಳಿತ ಮಂಡಳಿ ಅಧ್ಯಕ್ಷರಾದ ಸಿಎ
ಶಿವಾನಂದ ಪೈ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಚಂದ್ರಶೇಖರ ಹೆಗ್ಡೆ, ಟಿ ಎ
ಜಗದೀಶ್‌, ವೆಂಕಟೇಶ್‌ ಪ್ರಭು, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಕೋಟ್ಯಾನ್‌,
ರಮೇಶ್‌ ಎಸ್‌ ಸಿ, ಅಧ್ಯಾಪಕ ಅಧ್ಯಾಪಕೇತರ ಬಂಧುಗಳು ಗುರು ಪಾದುಕಾ ದಿಗ್ವಿಜಯ ರಥಯಾತ್ರೆಯ ಸೊಬಗು ಹಾಗೂ
ಆರಾಧನಾ ಕೈಂಕರ್ಯವನ್ನು ಕಾಲೇಜಿನ ಪ್ರಾಚಾರ್ಯರಾದಿಯಾಗಿ ಎಲ್ಲರೂ ಭಕ್ತಿ ಭಾವದಿಂದ ಕಣ್ತುಂಬಿಕೊಂಡರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top