ಶ್ರೀರಾಮ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ 6ನೇ ಶಾಖೆ ಕಾರ್ಕಳದಲ್ಲಿ ಕಾರ್ಯಾರಂಭ

Picture of RB NEWS

RB NEWS

Bureau Report

ಕಾರ್ಕಳ : ಶ್ರದ್ಧೆ, ನಿಷ್ಠೆ, ಪ್ರಮಾಣಿಕತೆ, ಸೇವಾಮನೋಭಾವ ಹೆಚ್ಚಿದಾಗ ವ್ಯವಹಾರದಲ್ಲಿ ಪ್ರಗತಿಹೊಂದಲು ಸಾಧ್ಯ.‌ ಗ್ರಾಹಕರ ನಂಬಿಕೆ ಹಾಗೂ ವಿಸ್ವಾಸರ್ಹಗಳಿಸಿದ ಫಲವಾಗಿ ಶ್ರೀರಾಮ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯು ಕಾರ್ಕಳದಲ್ಲಿ ಶಾಖೆಯನ್ನು ಆರಂಭಿಸುವ ಮೂಲಕ ಹೊಸ ದಿಶೆಯನ್ನು ತೆರೆದಿದೆ ಎಂದು ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಪಿ. ಎಸ್ ಹೇಳಿದರು.

ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ 6ನೇ ಶಾಖೆಯನ್ನು ಕಾರ್ಕಳದ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ ಹತ್ತಿರದ ಪ್ರೈಂ ಸಿಟಿ ಸೆಂಟರ್ ನಲ್ಲಿ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಆರ್ಥಿಕತೆ ವೃದ್ಧಿಗೆ ಕ್ರೆಡಿಟ್‌ ಕೋ ಸೊಸೈಟಿಗಳ ಕೊಡುಗೆ ಅಪಾರವಾಗಿದ್ದು, ಇದಕ್ಕೆ ಶ್ರೀರಾಮ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯೇ ಉದಾಹರಣೆ ಎಂದರು. ಕಾರ್ಕಳ, ಹೆಬ್ರಿ ಭಾಗದ ಜನರಿಗೆ ಕೃಷಿ, ಮನೆ ನಿರ್ಮಾಣ, ವಿವಾಹ ಸಹಿತ ಮೊದಲಾದ ವಿಷಯಗಳಿಗೆ ಸಂಬಂಧಿಸಿ ಹಣಕಾಸು ವಹಿವಾಟಿಗೆ ಸಾಕಷ್ಟು ಅನುಕೂಲಗಳಾಗಲಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ನಾಗರಾಜ್ ರಾವ್ ಸ್ವಾಗತಿಸಿ, ಪ್ರಸ್ತಾವನೆಗೈದು, ರೂ. 20 ಲಕ್ಷ ಬಂಡವಾಳದೊಂದಿಗೆ ಆರಂಭಿಸಿದ ಶ್ರೀರಾಮ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯು ರೂ. 384 ಕೋ.ರೂ.ಅಧಿಕ ವ್ಯವಹಾರ ನಡೆಸುತ್ತಿದೆ. ಇಂದು ಎಲ್ಲ ಸಮಾಜ ಬಾಂಧವರು ಹಣಕಾಸು ವ್ಯವಹಾರ ನಡೆಸುವ ಸಂಸ್ಥೆಯಾಗಿ ಯಶಸ್ವಿಯಾಗಿ ರೂಪುಗೊಂಡಿದೆ ಎಂದರು. ಸಮಾಜದ ಹಿರಿಯ ದೂರದೃಷ್ಟಿ, ಬದ್ಧತೆ ಇದಕ್ಕೆ ಕಾರಣ. ಇಂದು
ಎಲ್ಲ ಶಾಖೆಗಳು ಯಶಸ್ವಿಯಾಗಿ ನಡೆಯುತ್ತಿದೆ. ಸಾಲ,, ಆದಾಯ, ಲಾಭಾಂಶ, ಠೇವಣಿ ವಿಷಯದಲ್ಲಿ ಉತ್ತರೋತ್ತರ ಅಭಿವೃದ್ಧಿ ಸಂಸ್ಥೆ ಹೊಂದುತ್ತಿದೆ. ಇದಕ್ಕೆ ಸರ್ವ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಸಿಬಂದಿ‌ ಸಹಕಾರವು ಉತ್ತಮವಾಗಿದೆ ಎಂದರು.

ಸಹಕಾರ ಇಲಾಖೆ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್ .ವಿ, ಕಾರ್ಕಳ ಪುರಸಭೆ ಅಧ್ಯಕ್ಷ ಯೋಗೀಶ್‌ ದೇವಾಡಿಗ, ಶ್ರೀರಾಮ ಕ್ಷತ್ರೀಯ ಸಂಘದ ಕಾರ್ಕಳ ಅಧ್ಯಕ್ಷ ಗುರುಪ್ರಸಾದ್ ಅಜೆಕಾರು, ಕಾರ್ಕಳ ಶ್ರೀರಾಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಾರ್ಥಸಾರಥಿ, ಕಾರ್ಕಳ ಪ್ರೈಮ್ ಪ್ರಾಪರ್ಟಿಸ್ ಮಾಲಕ ಸುವೃತ್ ಜೈನ್ , ಪ್ರಮುಖರಾದ ಜಿ. ಆರ್. ಪ್ರಕಾಶ್, ಆಡಳಿತ ಮಂಡಳಿ ಸದಸ್ಯರಾದ ಅಶೋಕ್ ಬೆಟ್ಟಿನ್, ಬಿ.ರಾಧಾಕೃಷ್ಣ ನಾಯಕ್, ಎಂ. ಜಿ. ರಾಜೇಶ್, ಅಜಯ್ ಹವಾಲ್ದಾರ್, ಸೂರ್ಯಕಾಂತ್, ಕೃಷ್ಣಯ್ಯ ವಿ.ಮದ್ದೋಡಿ, ಬಿ. ಶ್ರೀಧರ್, ರಶ್ಮಿ ಪುಷ್ಪರಾಜ್, ಕೆ. ಶಾರದಾ ಉಪಸ್ಥಿತರಿದ್ದರು.

ಸಾಂಕೇತಿಕವಾಗಿ ಶೇರ್ ಮತ್ತು ಎಫ್ ಡಿ ಸರ್ಟಿಫಿಕೇಟ್ ಸಾಂಕೇತಿಕವಾಗಿ ವಿತರಿಸಲಾಯಿತು. ಆಡಳಿತ ಮಂಡಳಿ ಸದಸ್ಯ ಶ್ರೀಧರ್‌ ಪಿ. ಎಸ್‌. ವಂದಿಸಿ, ಮನ್‌ಮೋಹನ್‌ ರಾವ್‌ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top