ಶ್ರೀಕೃಷ್ಣ ಮಠಕ್ಕೆ ಬಿ.ಎಲ್.ಸಂತೋಷ್ ಭೇಟಿ

Picture of RB NEWS

RB NEWS

Bureau Report

ಉಡುಪಿ : ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಉಡುಪಿಯ ಅಷ್ಟಮಠದ ಶ್ರೀ ಕೃಷ್ಣ ದರ್ಶನ ಪಡೆದರು.

ತದನತರ ಗೋ ಶಾಲೆಗೆ ತೆರಳಿ ಗೋ ಸೇವೆ ಮಾಡಿ ಗೀತಮಂದಿರದಲ್ಲಿ ಪರ್ಯಾಯ ಉಭಯ ಶ್ರೀಪಾದರಿಂದ ಅನುಗ್ರಹ ಪ್ರಸಾದ ಸ್ವೀಕಾರ ಮಾಡಿದರು.

ಪೂಜ್ಯ ಪರ್ಯಾಯ ಪುತ್ತಿಗೆ ಶ್ರೀಪಾದರು ಸಂತೋಷರವರ ದೇಶ ಸೇವೆಯ ಕಾರ್ಯವನ್ನು ಮೆಚ್ಚಿ ಶ್ರೀಕೃಷ್ಣಾನುಗ್ರವನ್ನು ಪ್ರದಾನ ಮಾಡಿದರು.

ಕೋಟಿ ಗೀತಾ ಲೇಖನ ಯಜ್ಞ ಅಭಿಯಾನದ ವಿವರವನ್ನು ಪಡೆದುಕೊಂಡ ಸಂತೋಷರವರು ಶ್ರೀಗಳಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಿದರು.

ಬಳಿಕ ಗೀತಾ ಮಂದಿರದಲ್ಲಿ ಭಾರತ್ ಮೇಳ ದ ಅಂಗವಾಗಿ ನಡೆಯುವ ವಿಶೇಷ ವಿಶ್ವರೂಪ ದ ಪ್ಲಾನಿಟೋರಿಯಂ ಪ್ರದರ್ಶನ ದ ಉದ್ಘಾಟನೆಯನ್ನು ಬಿ ಎಲ್ ಸಂತೋಷ್ ನೆರವೇರಿಸಿದರು.

ಶ್ರೀಕೃಷ್ಣ ಮಹಿಮೆಯ ಸಂಕ್ಷಿಪ್ತ ಚಿತ್ರವನ್ನು ನೋಡಿ ಸಂತಸ ವ್ಯಕ್ತಪಡಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top