ಹೊಸ ವರುಷವು ಬಂದಿತು! ನಮಗಾಗಿ!
ಹೊಸ ಜೀವನ ನಡೆಸುವ! ಸಲುವಾಗಿ!
ಹೊಸ ಗೀತೆಯು ಒಂದು! ಮೂಡುತಿದೆ!
ನಿಮಗಾಗಿಯೇ ನಾನು! ಬರೆದಿಹೆನು!! ಪಲ್ಲವಿ!!
ಹಳೆ ವರುಷದ ಕಲ್ಮಷವ! ತೊರೆಯೋಣ!
ಹಳೆ ಅನುಭವಗಳನು! ಉಳಿಸೋಣ!
ಹಳೆ ದ್ವೇಷವ ಮರೆತು! ಬದುಕೋಣ!
ಹಳೆ ಸ್ನೇಹವನೆಂದೂ! ನೆನೆಯೋಣ!! ೧!!
ಶುಭವಾಗಲಿ ನಿಮಗೆ! ಹೊಸ ವರುಷದಲಿ!
ಕ್ರೋಧಿ ನಾಮ!ಸಂವತ್ಸರದಲಿ!
ಕಾಮ ಕ್ರೋಧ! ದ್ವೇಷ ಮತ್ಸರಗಳು !ದೂರವಾಗುತಲಿ!
ರಾಮರಾಜ್ಯ ನೋಡುವ! ಭಾಗ್ಯವು ನಮ್ಮೆಲ್ಲರದಾಗಲಿ!! ೨!!
ಕಹಿಗಳ ನೆನೆಯದೆ! ಸಿಹಿಯ ಬೆರೆಸುತ ಬದುಕೋಣ!
ಹೊಸ ವರುಷದ ಶುಭಾಶಯಗಳು
–ನಿರ್ಮಲ ಹೃದಯ ಕಾಂತಾವರ ಶಿವಾನಂದ ಶೆಣೈ, ಕಾರ್ಕಳ




































