ಶಿವಮೊಗ್ಗ ಗ್ಯಾಂಗ್ ವಾರ್ ನಲ್ಲಿ ಸಾವನಪ್ಪಿದವರ ಸಂಖ್ಯೆ 3ಕ್ಕೆ ಏರಿಕೆ

ಶಿವಮೊಗ್ಗ: ಬುಧವಾರದಂದು ಶಿವಮೊಗ್ಗದಲ್ಲಿ ನಡೆದ ಗ್ಯಾಂಗ್ ವಾರ್ ನಲ್ಲಿ ಚಿಂತಾಜನಕದಲ್ಲಿ ಆಸ್ಪತ್ರೆಯೊಂದರ ತೀವ್ರನಿಗಾವಿಭಾಗದಲ್ಲಿ ದಾಖಲಾಗಿದ್ದ ರೌಡಿಶೀಟರ್ ಖುರೇಶಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಶಿವಮೊಗ್ಗದ ಜನನಿಬಿಡ ಪ್ರದೇಶ ಮೀನು ಮಾರುಕಟ್ಟೆ ಬಳಿ ಸಂಜೆ 6 ಗಂಟೆ ಸುಮಾರಿಗೆ ರೌಡಿಶೀಟರ್ ಯಾಶೀನ್ ಖುರೇಶಿ ಮಟನ್ ಸ್ಟಾಲ್ನಲ್ಲಿ ಇದ್ದಿದ್ದನ್ನ ಖಚಿತ ಪಡಿಸಿಕೊಂಡ ಶೋಹಿಲ್ ಹಾಗೂ ಗೌಸ್ ತಂಡ ಏಕಾಏಕಿ ಬಂದು ಲಾಂಗು, ಮಚ್ಚಿನಿಂದ ಖುರೇಶಿ ಮೇಲೆ ಹಲ್ಲೆ ಮಾಡಿತ್ತು.

ಈ ಘಟನೆಯಿಂದ ರೊಚ್ಚಿಗೆದ್ದ ಖುರೇಶಿ ಕಡೆ ಹುಡುಗರು, ಶೋಹಿಲ್ ಮತ್ತು ಗೌಸ್ ಗ್ಯಾಂಗ್ ಮೇಲೆ ಪ್ರತಿ ದಾಳಿ ಮಾಡಿ ಮಾರಕಾಸ್ತ್ರ, ಚಪ್ಪಡಿ ಕಲ್ಲು, ಸೈಕಲ್ ಎತ್ತಿ ಹಾಕಿ ಇಬ್ಬರನ್ನು ಕೊಲೆಗೈದಿದ್ದರು.
ಮಾರಾಣಾಂತಿಕವಾಗಿ ಹಲ್ಲೆಗೊಳಗಾದ ಖುರೇಶಿಯನ್ನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯಾಸಿನ್ ಖುರೇಶಿ ಇಹಲೋಕ ತ್ಯಜಿಸಿದ್ದಾನೆ.
ರೌಡಿಗಳ ಕಾಳಗದಲ್ಲಿ ಸೇಬು ಹಾಗು ಗೌಸ್ ಸ್ಥಳದಲ್ಲಿಯೆ ಸಾವನ್ನಪ್ಪಿದ್ದರು. ಖುರೇಶಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.ಮಾದಕ ವಸ್ತುಗಳ ಮಾರಾಟ ಜಾಲ ಪ್ರಕರಣದಲ್ಲಿ ಭಾಗಿ ಆಗಿರುವ ಶಂಕೆ ಇದೆ. ನಾಲ್ಕು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ.





































