ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಹೇಳಿಕೆ ಅನುಷ್ಠಾನಗೊಳಿಸಲು ಮುಂದಾದ ಕೇರಳ ಸರಕಾರ

Picture of RB NEWS

RB NEWS

Bureau Report

ತಿರುವನಂತಪುರ: ದೇವಸ್ಥಾನಗಳಿಗೆ ಪ್ರವೇಶಿಸುವ ಮೊದಲು ಪುರುಷರು ತಮ್ಮ ಮೇಲ್ವಸ್ತ್ರವನ್ನು ತೆಗೆದುಹಾಕಬೇಕೆಂಬ ನಿಯಮವನ್ನು ಕೊನೆಗೊಳಿಸಲು ಕೇರಳ ದೇವಸ್ವಂ ಮಂಡಳಿಯು ಯೋಜಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಹೇಳಿದ್ದಾರೆ.

ಮಂಗಳವಾರ ಶಿವಗಿರಿ ತೀರ್ಥೋದ್ಭವ ಸಮಾವೇಶದಲ್ಲಿ ಮಾತನಾಡಿದ ಅವರು, ಮೇಲ್ವಸ್ತ್ರ ತೆಗೆಯುವ ಪದ್ಧತಿಯನ್ನು ಸಾಮಾಜಿಕ ಅನಿಷ್ಟ ಎಂದು ಬಣ್ಣಿಸಿದ್ದರಲ್ಲದೆ, ಅದನ್ನು ನಿರ್ಮೂಲನೆ ಮಾಡುವಂತೆ ಕರೆ ನೀಡಿದ್ದರು.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯನ್, ‘ದೇವಸ್ವಂ ಮಂಡಳಿಯ ಪ್ರತಿನಿಧಿಯೊಬ್ಬರು ಇಂದು ನನ್ನನ್ನು ಭೇಟಿ ಮಾಡಿ, ಆ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಹೇಳಿದರು. ಅದು ಒಳ್ಳೆಯದು ಎಂದು ನಾನು ಹೇಳಿದೆ’ ಎಂದು ಹೇಳಿದ್ದಾರೆ.

ಆದರೆ ಯಾವ ದೇವಸ್ವಂ ಮಂಡಳಿಯು ಈ ನಿರ್ಧಾರವನ್ನು ಜಾರಿಗೆ ತರಲಿದೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಿಲ್ಲ.

ಕೇರಳದಲ್ಲಿ ಗುರುವಾಯೂರ್, ತಿರುವಾಂಕೂರ್, ಮಲಬಾ‌ರ್, ಕೊಚ್ಚಿನ್ ಮತ್ತು ಕೂಡಲ್ಮಾಣಿಕ್ಯಂ ಸೇರಿ ಒಟ್ಟು ಐದು ದೇವಸ್ವಂ ಮಂಡಳಿಗಳು ಸುಮಾರು 3,000 ದೇವಾಲಯಗಳನ್ನು ನಿರ್ವಹಿಸುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top