ಶಿಲ್ಪಿ ಕೃಷ್ಣ ನಾಯಕ್ ಹೇಳಿಕೆಗೆ ಮುಸ್ಲಿಂ ಮುಖಂಡ ಶೇಕ್ ಶಬ್ಬೀರ್ ಪ್ರತಿಕ್ರಿಯೆ

Picture of RB NEWS

RB NEWS

Bureau Report

ಶಿಲ್ಪಿ ಕೃಷ್ಣ ನಾಯಕ್ ಹೇಳಿಕೆಗೆ ಮುಸ್ಲಿಂ ಮುಖಂಡ ಶೇಕ್ ಶಬ್ಬೀರ್ ಪ್ರತಿಕ್ರಿಯೆ

ಕಾರ್ಕಳ: ಕಾರ್ಕಳವನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಶಾಸಕ ಸುನಿಲ್ ಕುಮಾರ್ ರವರು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಸ್ಥಾಪಿಸಿರುವ ಪರುಶುರಾಮನ ಮೂರ್ತಿ ಪ್ರಶಂಸನೀಯ. ಆದರೆ ಈ ಮೂರ್ತಿಗೂ ಮುಸ್ಲಿಂರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಕಾರ್ಕಳದ ಅಭಿವೃದ್ಧಿಯಲ್ಲಿ ಮುಸ್ಲಿಮರ ಪಾತ್ರವೂ ಇದೆ ಎಂಬುದು ಮರೆಯುವಂತಿಲ್ಲ ಎಂದು ಮುಸ್ಲಿಂ ಮುಖಂಡ ಶೇಕ್ ಶಬ್ಬೀರ್ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಕಳ ಶಾಂತಿ ಸೌಹಾರ್ದತೆಗೆ ಹಾಗೂ ಕೋಮು ಸೌಹಾರ್ದ ಕ್ಕೆ ಹೆಸರುವಾಸಿ. ಇಲ್ಲಿ ಎಲ್ಲಾ ಜಾತಿ ಜನಾಂಗದ ಜನರು ಅನ್ಯೋನ್ಯವಾಗಿ ಬದುಕುತಿದ್ದಾರೆ.

ಆದರೆ ಶಿಲ್ಪಿ ಕೃಷ್ಣ ನಾಯಕ್ ಇದಕ್ಕೆ ಹುಳಿಹುಂಡುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಅವರು ತಮ್ಮ ವಿಡಿಯೋ ಒಂದರಲ್ಲಿ ಮೂರ್ತಿಏತ್ತಲು ಮುಸ್ಲಿಮರನ್ನು ಕರೆದುಕೊಂಡು ಬಂದಿದ್ದರು ಎಂದು ಹೇಳಿದ್ದು ಇದಕ್ಕೆ ಮುಸ್ಲಿಂ ಮುಖಂಡ ಮಿಯ್ಯಾರು ಶೇಕ್ ಶಬ್ಬೀರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀವು ತಪ್ಪು ಮಾಡಿಲ್ಲ ಎಂದಾದರೆ ನಿಮಗೆ ಹೆದರಿಕೆ ಯಾಕೆ. ನಿಮ್ಮ ಮಾತು ನಿಮ್ಮ ಅಸಹಾಯಕತೆಯನ್ನು ಎದ್ದು ತೋರಿಸುತ್ತದೆ. ಇಂತಹ ಬಾಲಿಶ ಹೇಳಿಕೆಗಳಿಂದ ದಾರಿ ತಪ್ಪಿಸುವ ಕೆಲಸವನ್ನು ಮಾಡಬೇಡಿ. ಕೋಮು ಪ್ರಚೋದನೆಗೆ ಅವಕಾಶ ನೀಡಬೇಡಿ. ಮೂರ್ತಿಯ ಬಗ್ಗೆ ಸತ್ಯಾಸತ್ಯತೆ ತಿಳಿಸಿ ಕಾರ್ಕಳದ ಮಹಾಜನರಲ್ಲಿ ಕ್ಷಮಾಪಣೆಯನ್ನು ಕೇಳಿ ಎಂದು ಶಿಲ್ಪಿ ಕೃಷ್ಣ ನಾಯಕ್ ಅವರಿಗೆ ಶೇಕ್ ಶಬ್ಬೀರ್ ಸವಾಲು ಹಾಕಿದ್ದಾರೆ.

ನೀವು ಮಾಡಿದ ತಪ್ಪಿನಿಂದ ಶಾಸಕರು ಸೇರಿ ಈ ಕಾರ್ಕಳದ ಜನತೆ ಮಾನಸಿಕ ನೋವಿನ ಜೊತೆ ನೆಮ್ಮದಿ ಕಳೆದುಕೊಳ್ಳುವಂತಾಗಿದೆ.

ನಿಮಗೆ ಕಾನೂನಿನ ಮೇಲೆ ನಂಬಿಕೆ ಇದ್ದರೆ ಪೊಲೀಸರಿಗೆ ಅವರ ಕರ್ತವ್ಯವನ್ನು ನಿಭಾಯಿಸಲು ಬಿಡಿ ಅದನ್ನು ಬಿಟ್ಟು ದೌರ್ಜನ್ಯದ ಕಥೆ ಕಟ್ಟಬೇಡಿ ಎಂದು ತಿಳಿಮಾತು ಹೇಳಿದ್ದಾರೆ.

.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top