ಶಿರ್ತಾಡಿಯಲ್ಲಿ ಕಾನೂನು ಪದವಿ ಕಾಲೇಜು ಆರಂಭ
ಮೂಡುಬಿದಿರೆ : ಕಾನೂನು ಪದವಿ ಪಡೆಯಲು ಆಸಕ್ತಿ ಇರುವ ವಿದ್ಯಾರ್ಥಿಗಳು ಮಂಗಳೂರಿಗೋ, ಉಡುಪಿಗೋ, ಸುಳ್ಯ ಅಥವಾ ಪುತ್ತೂರಿಗೋ ಹೋಗಬೇಕಿತ್ತು.

ಇನ್ನು ಅಂತಹ ಚಿಂತೆ ಮಾಡಬೇಕಿಲ್ಲ. ಮೂಡಬಿದ್ರಿಯಿಂದ 11ಕಿ.ಮೀ ಹಾಗೂ ಕಾರ್ಕಳದ ಹೊಸ್ಮಾರಿನಿಂದ 8 ಕಿ.ಮೀ ದೂರದ ಶಿರ್ತಾಡಿಯ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯದೊಂದಿಗೆ ಶಿಕ್ಷಣ ಕ್ರಾಂತಿ ಮಾಡಿದ ಭುವನಜ್ಯೋತಿ ವಸತಿ ಶಾಲೆಯಲ್ಲಿ ಕಾನೂನು ಕಾಲೇಜು ಪ್ರಾರಂಭ ಪ್ರಾರಂಭಗೊಂಡಿದೆ.
ಶಿಕ್ಷಣ ರಂಗದಲ್ಲಿ ರಾಜ್ಯದಾದ್ಯಂತ ಹೊಸ ಚಾಪು ಮೂಡಿಸಿದ ಶಿರ್ತಾಡಿಯ ಭುವನಜ್ಯೋತಿ ವಸತಿ ಶಾಲೆಯ ಆಡಳಿತ ಮಂಡಳಿಯು ಕಾನೂನು ಕಾಲೇಜನ್ನು ಪ್ರಾರಂಭಿಸುವ ಮೂಲಕ ಹೊಸ ಕ್ರಾಂತಿಗೆ ಹೆಜ್ಜೆಯಿರಿಸಿದೆ.
ಗ್ರಾಮೀಣ ಪ್ರದೇಶದಲ್ಲೂ ಒಂದು ಕಾನೂನು ಕಾಲೇಜು ಆಗಬೇಕು, ಆ ಮೂಲಕ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೂ ಅನುಕೂಲವಾಗಬೇಕೆಂಬ ಉದ್ದೇಶ ದಿಂದ ಕಳೆದ ಕೆಲ ವರ್ಷಗಳಿಂದ ಪ್ರಯತ್ನ ಪಟ್ಟಿರುವ ಈ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಡಿಸೋಜಾ ಅವರು ತಮ್ಮ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.

5 ವರ್ಷಗಳ ಎಲ್ ಎಲ್ ಬಿ ಪ್ರವೇಶಾತಿಗೆ ಪ್ರಸಕ್ತ ವರ್ಷದ ಕೊನೆ ದಿನಾಂಕ 2024 ಆಗಸ್ಟ್ 16 ಆಗಿರುತ್ತದೆ.
ಸಂಪರ್ಕಿಸ ಬೇಕಾದ ಮೊಬೈಲ್ನಂಬ್ರ : 9364899733, 9364899734
ಸಂಬಂಧಪಟ್ಟ ಇಲಾಖೆಯಿಂದ ಇತ್ತೀಚೆಗೆ ಅನುಮತಿ ಸಿಕ್ಕಿದ್ದು ಈಗಾಗಲೇ ಬಿ.ಬಿ.ಎ., ಎಲ್.ಎಲ್.ಬಿ ಐದು ವರ್ಷಗಳ ಕೋರ್ಸಿಗೆ ದಾಖಲಾತಿ ಪ್ರಾರಂಭಗೊಂಡಿದೆ. ಮೂರು ವರ್ಷದ ಎಲ್.ಎಲ್.ಬಿ ಕೋರ್ಸ್ ಕೂಡಾ ಇಲ್ಲಿದೆ.
ಶಿರ್ತಾಡಿಯ ಮುಖ್ಯ ಪ್ರದೇಶದಲ್ಲೇ ಈ ವಿದ್ಯಾಸಂಸ್ಥೆಯಿದ್ದು ಪ್ರಶಾಂತ ವಾತಾವರಣ, ವಿಶಾಲವಾದ ಜಾಗವನ್ನೊಳಗೊಂಡಿದೆ.
ಶಿರ್ತಾಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಕಾನೂನು ಕಾಲೇಜು ಪ್ರಾರಂಭಗೊಂಡಿರುವುದು ಸುತ್ತಮುತ್ತಲ ಜನರಲ್ಲಿ ಸಂತಸವುಂಟು ಮಾಡಿದೆ. ಆಸಕ್ತ ವಿದ್ಯಾರ್ಥಿಗಳು ಕೂಡಲೇ ಸಂಪರ್ಕಿಸಬಹುದು.






































