ಶಿಥಿಲಾವಸ್ಥೆಯಲ್ಲಿರುವ ಮೂಡುಬಿದರೆ ಫಿಜಿಯೋಥೆರಪಿ ಕಟ್ಟಡ

Picture of RB NEWS

RB NEWS

Bureau Report

ಮೂಡಿಬಿದಿರೆ: ಮೂಡುಬಿದಿರೆಯ ಸಾರ್ವಜನಿಕ ಆರೋಗ್ಯ ವಿಭಾಗದ ಆಸ್ಪತ್ರೆಗೆ ಅನಾರೋಗ್ಯವೇ?
-ಹೌದು ಎನ್ನುತ್ತದೆ ಕೆಲವಾರು ಸಂಗತಿಗಳು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯಾಚರಿಸುವ ಸಮುದಾಯ ಆರೋಗ್ಯ ಕೇಂದ್ರ ಹಲವಾರು ಕೊರತೆಗಳಿಂದ ರೋಗಪೀಡಿತವಾಗಿದೆ.

ಇಲ್ಲಿ ಹಲವಾರು ಸೌಲಭ್ಯಗಳು ಲಭ್ಯವಿದ್ದರೂ ಕೂಡ ಸೂಕ್ತ ಆರೋಗ್ಯ ಅಧಿಕಾರಿಗಳು, ವೈದ್ಯರುಗಳ ಕೊರತೆಯಿಂದ ಅಂತಹ ಪರಿಸ್ಥಿತಿಗೆ ಈಡಾಗಿದೆ.

ಈ ಬಗ್ಗೆ ಹಲವಾರು ಬಾರಿ ಮಾಧ್ಯಮಗಳಲ್ಲಿ ಬೆಳಕು ಚೆಲ್ಲಿದ್ದರೂ ಶಾಸಕರಾಗಲಿ, ಜನಪ್ರತಿನಿಧಿಗಳಾಗಲಿ, ಆರೋಗ್ಯ ಇಲಾಖೆಯಾಗಲಿ, ಜಿಲ್ಲಾ ಆಡಳಿತ ವರ್ಗದವರು ಗಮನಹರಿಸಿಲ್ಲ ಎನ್ನುವುದೇ ವಿಷಾದನೀಯವಾಗಿದೆ.

ಸಮುದಾಯ ಆರೋಗ್ಯ ಕೇಂದ್ರದ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಫಿಜಿಯೋಥೆರಪಿ ಕಟ್ಟಡದ ಪರಿಸ್ಥಿತಿ ನೋಡಿದರೆ ಅಯ್ಯೋ ಎನ್ನುವಂತಿದೆ.

ಎಲ್ಲಾ ಕಡೆಯೂ ಗೋಡೆ, ದಾರಂದ, ಕಿಟಕಿಗಳು ಪ್ರತ್ಯೆ ಪ್ರತ್ಯೇಕಗೊಂಡಿವೆ. ಕಿಟಕಿಗಳಿಗೆ ಯಾವುದಕ್ಕೂ ಕನ್ನಡಿಯೇ ಸರಿಯಾಗಿಲ್ಲ, ಎಲ್ಲವೂ ಅರ್ಧಂಬರ್ಧ ಒಡೆದು ಅರೆಬರೆಯಾಗಿವೆ. ಇರುವ ಕಿಟಕಿಗಳನ್ನು ಮುಚ್ಚಲು ಸಾಧ್ಯವಾಗುವುದಿಲ್ಲ. ಮೇಲ್ಚಾವಣಿಯ ಸಿಮೆಂಟುಗಳು ಈಗಾಗಲೇ ಅಲ್ಲಲ್ಲಿ ಕಳಚಿಕೊಂಡಿದೆ. ಧರೆಶಾಹಿಗೆ ಸಿದ್ಧತೆಯಲ್ಲಿ ಇರುವುದು ದೃಢ ಪಟ್ಟಿರುವಂತೆ ಕಾಡುತ್ತಿದೆ.

ಹೀಗಿದ್ದು ಈ ಕಟ್ಟಡದಲ್ಲಿ ಪ್ರತಿದಿನ ಹಲವಾರು ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದರ ಔಚಿತ್ಯವನ್ನೇ ಪ್ರಶ್ನೆ ಮಾಡಬೇಕಾಗಿದೆ.

ಹಿಂದೆ ಉತ್ತಮ ಸ್ಥಿತಿಯಲ್ಲಿ ಇದ್ದಾಗ ಪ್ರತಿದಿನ ನೂರಾರು ಚರ್ಮ ಹಾಗೂ ಕುಷ್ಟ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನೆನೆಸಿಕೊಳ್ಳಬಹುದು. ಅದರ ಗುರು ಹಾಗೆ ತತ್ಸಂಬಂಧಿ ಮಾಹಿತಿ ಫಲಕ ಇನ್ನೂ ಇಲ್ಲಿಯ ದ್ವಾರದ ಬದಿಯಲ್ಲಿ ಕಂಡುಬರುತ್ತದೆ.

ಇಲ್ಲಿಗೆ ಬರುವ ರೋಗಿಗಳಿಗೆ ಸೌಜನ್ಯ ರೀತಿಯಲ್ಲಿ ಚಿಕಿತ್ಸೆ ನೀಡುವ ದೊಡ್ಡಗುಣ ಇಲ್ಲಿ ಕಾಣುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.

ಸರಕಾರಿ ಕೆಲಸ ದೇವರ ಕೆಲಸ ಎಂಬ ನಿಲುವು ಇಲ್ಲಿನ ಸಿಬ್ಬಂದಿಗಳು ಆರ್ಥೈಸಿಕೊಳ್ಳುವ ಅಗತ್ಯ ಇದೆ.

ಸಮುದಾಯ ಆರೋಗ್ಯ ಕೇಂದ್ರದ ಖಾಲಿ ಇರುವ ಕೋಣೆಗಳಿಗೆ ಇಡೀ ಫಿಜಿಯೋಥೆರಪಿ ಘಟಕವನ್ನೇ ವರ್ಗಾಯಿಸಿ ಆರೋಗ್ಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಘಟಕ ಕಾರ್ಯಚರಿಸುವಂತೆ ಮಾಡಿದರೆ ಹೆಚ್ಚು ರೋಗಿಗಳಿಗೆ ಉಪಯುಕ್ತ ವಾಗುವಂತಹ ಸೌಲಭ್ಯ ದೊರಕಬಹುದು ಎಂದು ಅಭಿಪ್ರಾಯವೂ ಕೇಳಿಬರುತ್ತಿದೆ.

ಸಾಮಾನ್ಯವಾಗಿ ಆಗಮಿಸಿದ ರೋಗಿಗಳಿಗೆ ಯಾವುದೇ ಚಿಕಿತ್ಸೆ ನೀಡಿ ಕೆಲವಾರು ಬಾರಿ ಗಂಟೆಗಟ್ಟಲೆ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ.

ಎಲ್ಲ ವಯೋಮಾನದ ರೋಗಿಗಳು ಹಾಗೂ ಅವರ ಜೊತೆಗೆ ಬರುವಂತಹ ಮಂದಿಗೆ ತುರ್ತುಸಂದರ್ಭದಲ್ಲಿ ದೇಹಬಾಧೆ ತೀರಿಸಿಕೊಳ್ಳಲು ಶೌಚಾಲಯ ಇಲ್ಲಿಲ್ಲ.

ಇದ್ದ ಶೌಚಾಲಯಕ್ಕೆ ಬಾಗಿಲು ಬಿಡಿ, ಶೌಚಾಲಯಗಳೆಲ್ಲವೂ ಕಸ ಕೊಳಕುಗಳಿಂದ ತುಂಬಿದ್ದು ಮರದ ಕುರ್ಚಿಗಳುಗಳಿಂದ ತಡೆಯುಡಲ್ಪಟ್ಟಿರುವುದು ಕಂಡುಬರುತ್ತದೆ.

ಶಿಥಿಲಾವಸ್ಥೆಯ ಈ ಕಟ್ಟಡದಲ್ಲಿ ಫಿಜಿಯೋಥೆರಪಿ ಮುಂದುವರಿಸುವ ಭಂಡ ಧೈರ್ಯವನ್ನು ಸರಕಾರದ ವೈದ್ಯಾಧಿಕಾರಿಗಳು ಯಾಕಾಗಿ ಮಾಡುತ್ತಿದ್ದಾರೆ ಎಂದು ಅರ್ಥವಾಗುವುದಿಲ್ಲ.

ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ತಕ್ಷಣ ತಾಲೂಕು ವೈದ್ಯಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅರಿತು ತಕ್ಷಣ ಘಟಕವನ್ನು ವರ್ಗಾಯಿಸುವುದೇ ಸೂಕ್ತ.

ಖಾಸಗಿ ಸಹಭಾಗಿತ್ವ….

ದಕ್ಷಿಣ ಕನ್ನಡದ ಎಂಆರ್‌ಪಿಎಲ್, ಏನ್ ಐ ಟಿ ಕೆ, ನಿಟ್ಟೆ ಸಮೂಹ ಸಂಸ್ಥೆ, ಶ್ರೀನಿವಾಸ, ಆಳ್ವಾಸ್… ಇತ್ಯಾದಿ ಹಲವಾರು ಸಂಸ್ಥೆಗಳಿವೆ.
ಸಾಮಾಜಿಕ ಕಾರ್ಯಗಳಿಗೆ ಮುಂದಾಗುವ ಈ ಸಂಸ್ಥೆಗಳು ಸಹಕಾರ ನೀಡಿದ್ದಲ್ಲಿ ಸುಸಜ್ಜಿತ ಫಿಜಿಯೋಥೆರಪಿ ಘಟಕ ನಿರ್ಮಾಣದ ಗುರಿಹೊಂದಲು ಸಾಧ್ಯ‌. ಇದಕ್ಕೆ ಇಚ್ಛಾಶಕ್ತಿಯೂ ಅಗತ್ಯವಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top