ಕಾರ್ಕಳ : ಕಡಿಮೆ ಅಂಕ ಪಡೆದಿರುವವರು ಹಾಗೂ ಶಿಕ್ಷಣದಿಂದ ವಂಚಿತರಾಗಿ ಉಳಿದಿರುವ ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ರೂಪುಗೊಂಡ ಶಿಕ್ಷಣ ಸಂಸ್ಥೆ ಕಿಸಾನ್ ಸಭಾ ಟ್ರಸ್ಟಿನ ಮಹಾತ್ಮಾ ಗಾಂಧೀ ಪ್ರೌಢ ಶಾಲೆ.
ಕಾರ್ಕಳ ಕುಕ್ಕುಂದೂರಿನಲ್ಲಿ ಸ್ಥಾಪನೆಗೊಂಡ ಈ ಶಿಕ್ಷಣ ಸಂಸ್ಥೆಯ ರೂವಾರಿಗಳು ಮಾಲತಿ ಮೊಯಿಲಿ ಮತ್ತು ವೀರಪ್ಪ ಮೊಯಿಲಿ ಅವರು.
ಮಾಜಿಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರು ಅದಕ್ಕಾಗಿ ವಿವಿಧ ಸ್ತರಗಳಲ್ಲಿ ಶ್ರಮವಹಿಸಿದ ಫಲವಾಗಿ ಅಷ್ಟೊಂದು ಮಕ್ಕಳು ಶಿಕ್ಷಣ ಪಡೆದು ಸ್ವಾವಲಂಬಿ ಜೀವನ ಮಡೆಸುತ್ತಾ ಬಂದಿದ್ದಾರೆ. ಇನ್ನಷ್ಟು ಮಕ್ಕಳು ಅದರ ಹಾದಿಯನ್ನು ಮುನ್ನಡೆಯಲಿದ್ದಾರೆ.

ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಕಿಸಾನ್ ಸಭಾ ಟ್ರಸ್ಟಿನ ಮಹಾತ್ಮಾ ಗಾಂಧೀ ಪ್ರೌಢ ಶಾಲೆಗೆ ದೊರೆತ್ತಿರುತ್ತದೆ.
ಶಿಕ್ಷಣ ಸಂಸ್ಥೆಯ ಆರಂಭದಿಂದ ಇಲ್ಲಿಯ ತನಕ ಅದರಲ್ಲಿ ಎರಡು ವರ್ಷ ಹೊರತು ಪಡಿಸಿ ಉಳಿದೆಲ್ಲ ವರ್ಷಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶೇ . 100 ಫಲಿತಾಂಶ ದೊರಕುತ್ತಾ ಬಂದಿದೆ.
ಶೇ.35 ಅಂಕ ಇರುವ ವಿದ್ಯಾರ್ಥಿಗೂ ಪ್ರವೇಶ ಅವಕಾಶ ನೀಡಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ. 90ಕ್ಕೂ ಅಂಕ ದೊರಕುವಂತೆ ಶಿಕ್ಷಣ ನೀಡುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ ಶೇ.94 ಅಂಕವನ್ನು ವಿದ್ಯಾರ್ಥಿ ಗಳಿಸಿರುವುದು ಗಮನಾರ್ಹವಾಗಿದೆ.
ಅದರ ಹಿಂದೆ ಶಿಕ್ಷಣ ಸಂಸ್ಥೆಯ ರೂವಾರಿಗಳು ಎಲ್ಲಾ ಅಧ್ಯಾಪಕ ವರ್ಗದವರು ಒಳಗೊಂಡಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಕಿಸಾನ್ ಸಭಾ ಟ್ರಸ್ಟಿನ ಮಹಾತ್ಮಾ ಗಾಂಧೀ ಪ್ರೌಢ ಶಾಲೆಯು ಮಾದರಿಯಾಗಿದೆ.





































