ಶಿಕ್ಷಕರ ಪಾತ್ರ ಅನನ್ಯ ಮತ್ತು ಅತ್ಯಂತ ಶ್ರೇಷ್ಠ – ಶಾಸಕ ಉಮಾನಾಥ ಕೋಟ್ಯಾನ್

Picture of RB NEWS

RB NEWS

Bureau Report

ಮೂಡುಬಿದಿರೆ: ಸ್ಥಳೀಯ ಶಿಕ್ಷಕರ ದಿನಾಚರಣೆ ಸಮಿತಿ, ಬೆಂಗಳೂರು ಶಿಕ್ಷಕರ ಕಲ್ಯಾಣ ನಿಧಿ ಯ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಕನ್ನಡ ಭವನದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕೆ.ಎಂ.ಎಫ್. ಅಧ್ಯಕ್ಷ ,ಜಿ.ಪಂ.ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಮಾತನಾಡಿದ ದೇಶಕ್ಕಾಗಿ ದುಡಿಯುವವರನ್ನು ನಿರ್ಮಿಸುವ ಶಿಕ್ಷಕರನ್ನು ಸದಾ ಸ್ಮರಿಸಿ, ತಲೆಬಾಗಲೇಬೇಕು. ಏಕೆಂದರೆ ಮಕ್ಕಳನ್ನು ಸಮಾಜ ಮುಖಿಯಾಗಿ ಬೆಳಗಿಸುವವರು ಅವರು ಎಂದರು.

ಬಂಟ್ವಾಳದ ಅಧ್ಯಾಪಕ ವಿಠಲ್ ನಾಯಕ್ ದಿಕ್ಸೂಚಿ ಭಾಷಣ ಮಾಡಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯತ್ ಆಡಳಿತ ಅಧಿಕಾರಿ ಡಾ.ಅರುಣ್ ಕುಮಾರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಬಿ., ತಾಲೂಕು ತಹಸೀಲ್ದಾರ್ ಪ್ರದೀಪ್ ಕುರುಡೇಕರ್ ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಹೆಚ್.ಎಸ್., ಉದ್ಯಮಿ-ಸಮಿತಿಯ ಖಜಾಂಚಿ ಶ್ರೀಪತಿ ಭಟ್ ,ದೈ.ಶಿ.ಪರಿವೀಕ್ಷನಾಧಿಕಾರಿ ನಿತ್ಯಾನಂದ ಶೆಟ್ಟಿ,,ಬಿ.ಆರ್.ಸಿ.ಯ ಸೌಮ್ಯ, ಸಂಘಗಳ ಪದಾಧಿಕಾರಿಗಳಾದ ನಾಗೇಶ್ ಎಂ,ರಾಮಕೃಷ್ಣ ಶಿರೂರು, ಶಿವಾನಂದ ಕಾಯ್ಕಿಣಿ, ಶಶಿಕಾಂತ ಜೈನ್, ನವೀನ್ ಪುತ್ರನ್ ಹಾಜರಿದ್ದರು.

ಮೂಡುಬಿದಿರೆ ತಾಲೂಕಿನ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಮು.ಶಿ. ರಾಜಶ್ರೀ ಸ್ಪರ್ಧೆ ವಿಜೇತರ ಪಟ್ಟಿಯನ್ನು ನಾಗರತ್ನ ಶಿರೂರು ಓದಿದರು.

ವಿರೂಪಾಕ್ಷಪ್ಪ ಸ್ವಾಗತಿಸಿದರು. ನಿತೇಶ್ ಕುಮಾರ್, ಮೀರಾ ಡಾಯಸ್ ಕಾರ್ಯಕ್ರಮ ನಿರ್ವಹಿಸಿದರು.ಶ್ರೀಪತಿ ಭಟ್ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top