ಶಾಸ್ತ್ರಿ, ಮಹಾತ್ಮರ ಜನ್ಮದಿನಾಚರಣೆ : ನಮ್ಮ ನಡಿಗೆ ಸ್ವಚ್ಛತಾ ಕಡೆಗೆ
ಕಾರ್ಕಳ : ಕಳೆದ ೫ ವರ್ಷಗಳಿಂದ ಕಾರ್ಕಳ ತಾಲೂಕಿನಲ್ಲಿ ಸ್ವಚ್ಛತಾ ಕ್ರಾಂತಿ ಮೂಡಿಸಿದ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ಕಾರ್ಯವು ಶ್ಲಾಘನೀಯವಾಗಿದೆ. ಇವರ ಸತ್ಕಾರ್ಯವು ಯುವ ಜನಾಂಗಕ್ಕೆ ಪ್ರೇರಿಣೆಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಧೀಶೆ ಶರ್ಮಿಳಾ ಸಿ ಎಸ್ ಅಭಿಮತ ವ್ಯಕ್ತ ಪಡಿಸಿದರು.
ಕಾನೂನು ಸೇವೆಗಳ ಸಮಿತಿ, ಕಾರ್ಕಳ ತಾಲೂಕು ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ಇವರ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಸ್ವಚ್ಛತಾ ಜಾಥ ಇಂದು ಅಯ್ಯಪ್ಪ ನಗರ ಆಟೋ ನಿಲ್ದಾಣದಿಂದ ವಿಜೇತ ವಿಶೇಷ ಶಾಲೆಯವರೆಗೆ ನಡೆಯಿತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸ್ವಚ್ಛತಾ ಅಭಿಯಾನದಲ್ಲಿ ಕಾರ್ಕಳ ಹಿರಿಯ ನ್ಯಾಯಧೀಶೆ ಶರ್ಮಿಳಾ ಸಿ.ಎಸ್ ಪ್ರಧಾನ ಸಿವಿಲ್ ನ್ಯಾಯಧೀಶೆ ಕೋಮಲ ಆರ್. ಸಿ, ಹೆಚ್ಚುವರಿ ಸಿವಿಲ್ ನ್ಯಾಯಧೀಶ ಅಬುತಾಹೀರ್, ವಕೀಲರ ಸಂಘದ ಉಪಾದ್ಯಕ್ಷ ಕೆ ಹರೀಶ್ ಅಧಿಕಾರಿ, ನ್ಯಾಯಾಲಯದ ಸಿಬ್ಬಂದಿಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.































