ಶಾಸಕರ ಮತ್ತು ಸಂಸದರ ಕಛೇರಿ, ಮನೆ ಮುಂದೆ ಅನಿರ್ದಿಷ್ಟ ಹೋರಾಟ : ಸಿಪಿಐ(ಎಂ)

Picture of RB NEWS

RB NEWS

Bureau Report

ಉಡುಪಿ : ಬೀಡಿ ಕಾರ್ಮಿಕರ ಕನಿಷ್ಟ ಕೂಲಿ,ಬಾಕಿ ಇರುವ ತುಟ್ಟಿಭತ್ಯೆ,ಇ.ಎಸ್.ಐ.ಆಸ್ಪತ್ರೆ,ಪಿಂಚಣಿ, ಪಿ.ಎಫ್ ಸಮಸ್ಯೆಗಳ ಬಗ್ಗೆ ಹೋರಾಟ ನಡೆದಿದ್ದು ಮುಂದೆ ಮತಷ್ಟು ತೀವ್ರ ಗೋಳಿಸಬೇಕಾಗಿದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಕ್ಷಾಂತರ ಬೀಡಿ ಕಾರ್ಮಿಕರು ಕೆಲಸ ಮಾಡಿ ತಮ್ಮ ಜೀವನ ಹಾಗೂ ಕುಟುಂಬ ನಿರ್ವಹಣೆಯನ್ನು ನಡೆಸುತ್ತಿದ್ದಾರೆ.ಬೀಡಿ ಕಂಪನಿಗಳಲ್ಲಿ ಬೇರೆ ಬೇರೆ ವಿಭಾಗದಲ್ಲಿ ಸಾವಿರಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಸರಕಾರ ಇವತ್ತು ಬೀಡಿ ಕಾರ್ಮಿಕರ ಬಗ್ಗೆ ಚಕಾರವೆತ್ತುತ್ತಿಲ್ಲ.ಸರ್ಕಾರ ನಿಗದಿ ಮಾಡಿದ ತುಟ್ಟಿಭತ್ಯೆಯನ್ನು ಮಾಲಕರು ನಿಡುತ್ತಿಲ್ಲ. ಅದ್ದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಕಾರ್ಮಿಕರು ಒಗ್ಗೂಡಿ ಎಲ್ಲಾ ಶಾಸಕರ ಮತ್ತು ಸಂಸದರ ಕಛೇರಿ ಮನೆ ಮುಂದೆ ಅನಿರ್ದಿಷ್ಟ ಹೋರಾಟ ಕೈಗೊಳ್ಳ ಬೇಕೆಂದು ಉಡುಪಿ ಜಿಲ್ಲಾ ಸಿಪಿಐ(ಎಂ) ಸಮಿತಿ ಸದಸ್ಯರಾದ ಕವಿರಾಜ್. ಎಸ್.ಕಾಂಚನ್ ಕರೆ ನೀಡಿದ್ದಾರೆ.

ಸಿ.ಪಿ.ಐ.[ಎo]ಪಕ್ಷದ ಕೇಳಾರ್ಕಳಬೆಟ್ಟು ಶಾಖಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಉಮೇಶ್ ಕುಂದರ್,ಉಡುಪಿ ವಲಯ ಸಮಿತಿ ಸದಸ್ಯೆ ನಳಿನಿ.ಎಸ್ ಹಾಗೂ ಶಾಖಾ ಸದಸ್ಯರು ಉಪಸ್ಥಿತರಿದ್ದರು.

ಶಾಖಾ ಕಾರ್ಯದರ್ಶಿ ವರದಿ ನೀಡಿ ಅದರ ಮೇಲೆ ಚರ್ಚೆ ನಡೆಸಿದರು.

ಹಿರಿಯ ಪಕ್ಷದ ಸದಸ್ಸೆ ರಾಧ ಧ್ವಜಾರೋಹಣವನ್ನು ನೆರವೇರಿಸಿದರು.

ಕೇಳಾರ್ಕಳಬೆಟ್ಟು ಶಾಖೆಯ ನೂತನ ಕಾರ್ಯದರ್ಶಿ ಯಾಗಿ ಕಮಲ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top