

ಶಾಸಕರೊಂದಿಗೆ ನಗರ ಯೋಜನಾ ಅಧಿಕಾರಿಗಳ ಸಭೆ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಶಾಸಕ ಉಮಾನಾಥ ಕೋಟ್ಯಾನ್ ಅವರು ತಮ್ಮ ಸೇವಕ ಕಚೇರಿಯಲ್ಲಿ ಮೂಲ್ಕಿ, ಮೂಡುಬಿದಿರೆ, ಬಜ್ಪೆ, ಕಿನ್ನಿಗೊಳಿಯ ನಗರ ಯೋಜನಾ ಇಂಜಿನಿಯರ್ ಗಳು ಹಾಗೂ ರೆವೆನ್ಯೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಮೇಲ್ಕಂಡ ಎಲ್ಲ ಪ್ರದೇಶಗಳ ಹಲವಾರು ಲೋಪದೋಷಗಳನ್ನು ಸರಿಪಡಿಸಲು ಶಾಸಕರು ನಿರ್ದೇಶನವನ್ನು ನೀಡಿದರು.



ಅದೇ ರೀತಿ ಈ ಎಲ್ಲಾ ಪ್ರದೇಶಗಳ ಮುಖ್ಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಅಧಿಕಾರಿ ಇಂದು ಅವರು ಎಲ್ಲವನ್ನು ಕೂಡ ಸಮಗ್ರವಾಗಿ ಪರಿಶೀಲಿಸಿ, ಕಾರ್ಯಗತಗೊಳಿಸುವಂತೆ ನಿರ್ದೇಶಿಸಿದರು.
ಇದೇ ಸಂದರ್ಭದಲ್ಲಿ ಮೂಡುಬಿದಿರೆ ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಶೋಭಲಕ್ಷ್ಮಿ, ರಕ್ಷಿತ್, ಅಜಯ್, ಹಾಗೂ ಇತರರು ಹಾಜರಿದ್ದರು.
ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಸದಸ್ಯರುಗಳು ಆಗಮಿಸಿ 2022 ಜುಲೈ 1 ರಿಂದ 2024 ಜುಲೈ 31ರ ತನಕದ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಡಿಸಿ ಅರ್ ಜಿ, ಕಮ್ಯುಟೇಶನ್, ಗಳಿಕೆ ರಜೆ, ನಗರೀಕರಣ ಮೊತ್ತವನ್ನು ಏಳನೇ ವೇತನದ ಲೆಕ್ಕಾಚಾರದಲ್ಲಿಯೇ ನೀಡಲು ಪರಿಷ್ಕೃತ ಆದೇಶ ಹೊರಡಿಸಿಸುವಂತೆ ಆಗ್ರಹಿಸಿ ಮೂಡುಬಿದಿರೆ ತಾಲೂಕು ಘಟಕದವರು ಮನವಿಯನ್ನು ಶಾಸಕರಿಗೆ ಅರ್ಪಿಸಿದರು.
ಅಲ್ಲದೆ ಹಲವಾರು ಸಾರ್ವಜನಿಕರು ತಮ್ಮ ಆಹವಾಲುಗಳನ್ನು ಸಲ್ಲಿಸಿದರು.














