




ಶಬರಿಮಲೆ ಯಾತ್ರಾರ್ಥಿಗಳಿಗೆ ಉಡುಪಿ ಮತ್ತು ಮಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಸೌಲಭ್ಯ ಕಲ್ಪಿಸಿ
ಕಾರ್ಕಳ : ವರ್ಷಂಪ್ರತಿ ಡಿಸೆಂಬರ್ ಮತ್ತು ಜನವರಿಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಲಕ್ಷಾಂತರ ಜನರು ಮಾಲೆಧಾರಿಗಳಾಗಿ ನಿಷ್ಠೆಯಿಂದ ವ್ರತ ನಿಯಮವನ್ನು ಪಾಲಿಸಿ, ಶಬರಿಮಲೆಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಯಾತ್ರೆಯನ್ನು ಕೈಗೊಳ್ಳುತ್ತಾರೆ.
ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕುಂದಾಪುರ – ಉಡುಪಿ – ಕಾರ್ಕಳ – ಮೂಡಬಿದ್ರಿ – ಮಂಗಳೂರು ಮಾರ್ಗವಾಗಿ ಶಬರಿಮಲೆಗೆ ವೋಲ್ವೋ ಬಸ್ಸು ಸೌಲಭ್ಯವನ್ನು ಒದಗಿಸಬೇಕಾಗಿಸಬೇಕು.
ಕರ್ಣಾಟಕ ರಾಜ್ಯ ಸರ್ಕಾರ, ಸಾರಿಗೆ ಸಚಿವರು ಹಾಗೂ ಸಾರಿಗೆ ಇಲಾಖೆ ಇದರ ಬಗ್ಗೆ ಗಮನಹರಿಸಬೇಕಾಗಿ ಎಂದು ಕಾರ್ಕಳ ಎನ್ ಎಸ್ ಯು ಐ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.





















