[t4b-ticker]

ಶಬರಿಮಲೆ ಚಿನ್ನ ಲೂಟಿ : ಆರೋಪಿ ಮುರಾರಿ ಬಾಬು ನಿಧನ

Picture of RB NEWS

RB NEWS

Bureau Report

ತಿರುವನಂತಪುರಂ: ಕೇರಳದ ರಾಜಕೀಯ
ಮತ್ತು ಸಾಮಾಜಿಕ ವಲಯಗಳಲ್ಲಿ ವ್ಯಾಪಕವಾಗಿ ಚರ್ಚೆಗೀಡಾದ ಶಬರಿಮಲೆ ಚಿನ್ನ ಲೂಟಿ ಪ್ರಕರಣದ ಆರೋಪಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಆಡಳಿತಾಧಿಕಾರಿ ಮುರಾರಿ ಬಾಬು (54) ಶುಕ್ರವಾರ ತಡರಾತ್ರಿ ಕೊಚ್ಚಿಯ ಖಾಸಗಿ ನಿಧನರಾದರು. ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಕ್ಯಾನ್ಸರ್ ಹಾಗೂ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಕೊಚ್ಚಿಯ ಅಮೃತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ತಡರಾತ್ರಿ ನಿಧನರಾದರು ಎಂದು ಆಸ್ಪತ್ರೆ ಅಧಿಕಾರಿಗಳು ದೃಢೀಕರಿಸಿದ್ದಾರೆ.

ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿ ಸೇವೆ ಸಲ್ಲಿಸಿದ್ದ ಮುರಾರಿ ಬಾಬು, ತರಬೇತಿ ಪೂರ್ಣಗೊಳಿಸುವುದಕ್ಕೂ ಮುನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಟಿಡಿಬಿಯಲ್ಲಿ ಅಧಿ ಕಾರಿಯಾಗಿ ಕೆಲಸಕ್ಕೆ ಸೇರಿದ್ದರು. ಏಟ್ಟುಮಾನೂರು ದೇವಸ್ಥಾನದಲ್ಲಿ ಗುಮಾಸ್ತರಾಗಿ ಶಾಶ್ವತ ನೇಮ ಕಾತಿ ಪಡೆದ ಅವರು ವೈಕ್ಕಂ, ಏಟ್ಟುಮಾನೂರ್ ಮತ್ತು ತಿರುನಕ್ಕರ ದೇವಸ್ಥಾನಗಳ ಉತ್ಸವದ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಟಿಡಿಬಿಯ ಉಪ ಆಯುಕ್ತರಾಗಿದ್ದಾಗ ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಲ್ಪಟ್ಟ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಮೊದಲು ಬಂಧಿಸಿತ್ತು. ಶಬರಿಮಲೆಯ ಕಾರ್ ನಿರ್ವಾಹಕ ಅಧಿಕಾರಿ ಮತ್ತು ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಅಕ್ರಮವಾಗಿ ಹಣ ಸಂಪಾದಿಸಿದ್ದಾರೆ ಎಂದು ತನಿಖಾ ತಂಡ ಆರೋಪಿಸಿದೆ. ಮೂಲಕ 90 ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಅವರು ತನಿಖಾ ತಂಡ ಆರೋಪ ಪಟ್ಟಿ ಸಲ್ಲಿಸಲು ವಿಳಂಬವಾದ ಕಾರಣ ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯ ಕಠಿಣ ಷರತ್ತುಗಳೊಂದಿಗೆ ಅವರಿಗೆ ಸಹಜ ಜಾಮೀನು ಮಂಜೂರು ಮಾಡಿತ್ತು.

ಜೈಲಿನಿಂದ ಬಿಡುಗಡೆಯಾದ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ನಡೆಸಿತ್ತು. ಪ್ರಕರಣ ಸಂಬಂಧಿಸಿ ಅಕ್ರಮ ಹಣಕಾಸು ವ್ಯವಹಾರಗಳ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಪ್ರತ್ಯೇಕ ತನಿಖೆಯನ್ನು ನಡೆಸುತ್ತಿದೆ. ಜಾಮೀನಿನ ಮೇಲೆ ಬಿಡುಗಡೆಯಾದ ಅವರು ಗಂಭೀರ ಆರೋಗ್ಯ ಸಮಸ್ಯೆಗಳಿಂದಾಗಿ ಮೂರು ತಿಂಗಳಿನಿಂದ ಕೊಚ್ಚಿಯ ಆಸ್ಪತ್ರೆಯಲ್ಲಿ ‘ಚಿಕಿತ್ಸೆ ಪಡೆಯುತ್ತಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top