ಶತಚಂಡಿಕಾ ಯಾಗ

Picture of RB NEWS

RB NEWS

Bureau Report

ಕಾರ್ಕಳ : ಕುಂಟಲ್ಪಾಡಿ ಬೈಲಡ್ಕ ರಕ್ರೇಶ್ವರೀ ನಾಗಬ್ರಹ್ಮ ಬನ ಶ್ರೀ ಬಾಲಾಜಿ ಅಯ್ಯಪ್ಪ ಮಂದಿರ ಟ್ರಸ್ಟ್ [ರಿ] ವತಿಯಿಂದ ಡಿ 06ರಿಂದ 14ರ ತನಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

06.12.2024 ರಿಂದ 12.12.2024 ಗುರುವಾರದವರೆಗೆ ಪ್ರತೀ ನಿತ್ಯ ಸಾಯಂಕಾಲ ಗಂಟೆ 4.00 ರಿಂದ 6.00ರ ವರೆಗೆ “ಶ್ರೀ ಮದ್ ಭಾಗವತ ಸಪ್ತಾಹಯಜ್ಞ, 6.30 ರಿಂದ ಫಲಾಹಾರ :

07.12.2024ನೇ ಶನಿವಾರ ಸಾಯಂಕಾಲ ಸೂರ್ಯಾಸ್ತದಿಂದ

ಸೂರ್ಯೋದಯದವರೆಗೆ “ಭಜನಾ ಮಂಗಲೋತ್ಸವ ” 08.12.2024ನೇ ರವಿವಾರ ಬೆಳಿಗ್ಗೆ ಸೂರ್ಯೋದಯಕ್ಕೆ “ಪಡಿಪೂಜೆ”

09.12.2024ನೇ ಸೋಮವಾರ ಚಂಡಿಕಾ ಹೋಮದ ಪೂರ್ವ ಭಾವೀ ಕಾರ್ಯಕ್ರಮಗಳ ಆರಂಭ .ಪ್ರಾತ:ಕಾಲ ಗಂಟೆ 7.00 ಕ್ಕೆ ಸಾಮೂಹಿಕ ಪ್ರಾರ್ಥನೆ ;ಮಹಾ ಸಂಕಲ್ಪ ಗಣಪತಿ ಪೂಜೆ ;ಕೃಚ್ಛಾಚರಣೆ,ಪುಣ್ಯಾಹ, ದೇವಾನಾಂದಿ, ಕಂಕಣ ಬಂಧನ, ಗಣಪತಿ ಹೋಮ ,ಋಗರಣ,ಪ್ರಧಾನ ಕಲಶ ಸ್ಥಾಪನೆ,ಸಪ್ತಶತೀ ಪಾರಾಯಣ ಆರಂಭ, ಮದ್ಯಾಹ್ನ 12.00ಕ್ಕೆ ಮಹಾಪೂಜೆ ಪ್ರಸಾದ ವಿತರಣೆ.

ಸಾಯಂಕಾಲ 6.00ಕ್ಕೆ ನವಾರ್ಣ ಜಪ, ಮಹಾಪೂಜೆ, ಅಷ್ಟಾವಧಾನ ಸೇವೆ;

10.12.2024 ನೇ ಮಂಗಳವಾರದಿಂದ 12.12.2024ನೆಗುರುವಾರ ತನಕ ಪ್ರತೀ ದಿನ ಪ್ರಾತ: ಕಾಲ ಗಂಟೆ 8.00 ರಿಂದ ಹತ್ತು ಮಂದಿ ಋತ್ವಿಜರಿಂದ ಸಪ್ತಶತೀ ಪಾರಾಯಣ ಗಂಟೆ 12.00ಕ್ಕೆ ಮಹಾ ಪೂಜೆ, ಪ್ರಸಾದ ವಿತರಣೆ.

ಸಾಯಂಕಾಲ 6.00 ಕ್ಕೆ ಲಲಿತಾ ಸಹಸ್ರನಾಮ ಅರ್ಚನೆ, ಜಪ,ಮಹಾಪೂಜೆ ಅಷ್ಟಾವಧಾನ ಸೇವೆ.

13.12.2024ನೇ ಶುಕ್ರವಾರ ದಂದು ಪ್ರಾತ:ಕಾಲ 6.00 ರಿಂದ ಗಣಪತಿ ಪೂಜೆ ಅರಣೀಮಥನ,ಪ್ರಧಾನ ಕುಂಡದಲ್ಲಿ ಅಗ್ನಿ ಸ್ಥಾಪನೆ “,ಶತ ಚಂಡಿಕಾ ಯಾಗ ಆರಂಭ

ಗಂಟೆ 11.00ಕ್ಕೆ ಜಗದ್ಗುರು ಶ್ರೀ ಶ್ರೀ ಶ್ರೀ ವಿಧುಶೇಖರಭಾರತೀ ಸನ್ನಿಧಾನಂ” ಗಳವರ ದಿವ್ಯ ಉಪಾಸ್ತಿತಿಯಲ್ಲಿ “ಚಂಡಿಕಾ ಯಾಗದ ಪೂರ್ಣಾಹುತಿ “ಮಹಾಪೂಜೆ, ಜಗದ್ಗುರುಗಳಿಂದ ಆಶೀರ್ವಚನ, ಕನ್ನಿಕಾ ಸುಹಾಸಿನಿ ಆರಾಧನೆ ;ದಂಪತಿ ಪೂಜೆ, ರಾಷ್ಟ್ರಾಶೀರ್ವಾದ, ಪ್ರಸಾದ ವಿತರಣೆ, ಮಹಾ ಅನ್ನ ಸಂತರ್ಪಣೆ ;ಸಾಯಂಕಾಲ ಗಂಟೆ 5.00ರಿಂದ ಫಲಶ್ರುತಿ ಕಥನ ;

14.12.2024ನೇ ಶನಿವಾರ ಪ್ರಾತ:ಕಾಲ ಗಂಟೆ 7.00 ರಿಂದ ಮೃತ್ಯುಂಜಯ ಹೋಮ, ಬೆಳಿಗ್ಗೆ ಗಂಟೆ 8.00ರಿಂದ ತುಳಸೀ ಹಾಗೂ ಪುಷ್ಪಗಳಿಂದ ಶ್ರೀ ಅಯ್ಯಪ್ಪ ಸ್ವಾಮಿಗೆ ಲಕ್ಷಾರ್ಚನೆ ; ಗಂಟೆ 12.30ಕ್ಕೆ ಮಹಾ ಪೂಜೆ ಪ್ರಸಾದ ವಿತರಣೆ ;ಅನ್ನ ಸಂತರ್ಪಣೆ ; ಅಪರಾಹ್ನ ಗಂಟೆ 3.00 ಕ್ಕೆ ಶನಿಪೂಜೆ ಪ್ರಸಾದ ವಿತರಣೆ ಫಲಾಹಾರ; ಗಂಟೆ 6.00ಕ್ಕೆ ಗುರುವಂದನಾ ಸಭಾ ಕಾರ್ಯಕ್ರಮ

ರಾತ್ರಿ ಗಂಟೆ 8.00 ಕ್ಕೆ ಕಲಾ ಸಂಗಮ ಕಲಾವಿದರಿಂದ ವಿಜಯ ಕುಮಾರ್ ಕೊಡಿಯಾಲಬೈಲ್ ನಿರ್ದೇಶನದ ಸ್ವರಾಜ್ ಶೆಟ್ಟಿ ಅಭಿನಯಿಸುವ “ಶಿವದೂತೆ ಗುಳಿಗೆ “ತುಳು ಪೌರಾಣಿಕ ನಾಟಕ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top