[t4b-ticker]

ವ್ಯಾಸ App ಬಿಡುಗಡೆ : ಮಕ್ಕಳಿಗಾಗಿ ರಾಮಾಯಣ ಮಹಾಭಾರತದ ಅನಿಮೇಟೆಡ್ ಸೀರೀಸ್

Picture of RB NEWS

RB NEWS

Bureau Report

ಮಕ್ಕಳಿಗಾಗಿ ಮಹಾಭಾರತ ರಾಮಾಯಣದ ಕಥೆಗಳನ್ನು ಅನಿಮೇಷನ್ ಮೂಲಕ ನೀಡುವ ಉದ್ದೇಶದಿಂದ “ವ್ಯಾಸ” ಎಂಬ ಕನ್ನಡದ App ಮಾರ್ಚ್ 8ರಂದು ಲೋಕಾರ್ಪಣೆಗೊಳ್ಳಲಿದೆ.
ಪ್ರಥಮ ಸೀರೀಸ್ ನಲ್ಲಿ “ಸರ್ಪಮೇಧ” ಕಥೆ ಇದ್ದು, ಸುಮಾರು 8 ರಿಂದ 10 ಎಪಿಸೋಡ್ಸ್ ಪ್ರತಿ ಭಾನುವಾರ ಬೆಳಿಗ್ಗೆ 10 ಘಂಟೆಗೆ ಪ್ರಸಾರಗೊಳ್ಳಲಿದೆ. ಇದರ ಪ್ರೋಮೋ ಹಾಗೂ App ಚಾಲನೆ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ಮಾರ್ಚ್ 8ರಂದು ಸಂಜೆ 4 ಗಂಟೆಗೆ ನಡೆಯಲಿದೆ.
ಕನ್ನಡದ ಈ ವಿನೂತನ ಪ್ರಯೋಗಕ್ಕೆ ನಾಡಿನ ಗಣ್ಯರು ಅಂದು ಚಾಲನೆ ನೀಡಲಿದ್ದಾರೆ. ಇದು ಸಂಪೂರ್ಣ ಉಚಿತ ಓ ಟಿ ಟಿ ಯಾಗಿದ್ದು, ಜಗತ್ತಿನಲ್ಲೇಡೆ ವೀಕ್ಷಿಸಬಹುದಾಗಿದೆ ಎಂದು ವ್ಯಾಸ ನಿರ್ಮಾಪಕರಾದ ಬಿ. ಮೇಘನಾ ಶೆಣೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top